ಹೊನ್ನಾವರ : ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಡೇ ನಲ್ಮ್ ಯೋಜನೆಯಡಿ ಹೊನ್ನವರ ಪಟ್ಟಣ ಪಂಚಾಯತದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು ಒಂದು ಹುದ್ದೆಯ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.
ಡೇ ನಲ್ಮ್ ಯೋಜನೆಯಡಿ ಸಂಘಟಿಸಿರುವ ಮಹಿಳಾ ಸ್ವಸಹಾಯ ಸಂಘದ ೧೮ ರಿಂದ ೪೫ ವರ್ಷದೊಳಗಿನ ಸದಸ್ಯರು ತಮ್ಮ ಅರ್ಜಿಯನ್ನು ಪಟ್ಟಣ ಪಂಚಾಯತಿಯಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ ಒಂಬತ್ತರೊಳಗೆ ಸಲ್ಲಿಸತಕ್ಕದ್ದು,
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆ ಯಲ್ಲಿ ಖುದ್ದಾಗಿ ಬೇಟಿಯಾಗಿ ಅಥವಾ ಪಟ್ಟಣ ಪಂಚಾಯತ್ ಸೂಚನಾ ಫಲಕದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳ ನಹುದಾಗಿದೆ ಎಂದು ಮಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment