ಕಾರವಾರ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹಾಗೂ ನಿರುದ್ಯೋಗಿಗಳಿಗೆ 6 ತಿಂಗಳ ಕೌಶಲ್ಯ ತರಬೇತಿ ನೀಡಲು ಸ್ಕಿಲ್ ಹಬ್ ಸೆಂಟರ್ ತೆರಯಲಾಗುತ್ತಿದೆ.
ಆಟೋಮೋಟಿವ್ ಸರ್ವಿಸ್ ಟೆಕ್ನಿಶಿಯನ್ ಮತ್ತು ಸೇಲ್ಸ್ ಅಸೋಸಿಯೇಟ್ (ಇವೆಂಟ್ ಮ್ಯಾನೇಜ್ಮೆಂಟ್, ಸೇಲ್ಸ್ ಆಫ್ ಗೂಡ್ಸ ಆ್ಯಂಡ್ ಸರ್ವಿಸ್, ಕ್ಯಾಶ್ ರಜಿಸ್ಟರ್ ಮೇಂಟೈನ್) ಸೆಕ್ಟರ್ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ 15 ರಿಂದ 45 ವರ್ಷದೊಳಗಿನ ಆಸಕ್ತ ಮಹಿಳಾ ಮತ್ತು ಪುರಷ ಅಭ್ಯರ್ಥಿಗಳು ಕಾರವಾರದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಫ್ರೌಢಶಾಲೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ತರಬೇತಿ ನಂತರ ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು : 94486 11374, ಉಪ – ಪ್ರಾಂಶುಪಾಲರು : 99649 42864 ವೃತ್ತಿ ಉಪನ್ಯಾಸಕರು: 81054 62913-76194 06685 ಅವರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯು ತಿಳಿಸಿದೆ.
Leave a Comment