ಹಳಿಯಾಳ ನಗರದಲ್ಲಿ ದಿನಾಕ 27-02-2022 ರಂದು ಬಾಬುರಾವ ಕಾಂಪ್ಲೆಕ್ಸ್ ನಲ್ಲಿ ಟಿ. ಎಸ್. ಎಸ್ ಮಿನಿ ಸೂಪರ್ ಮಾರ್ಕೆಟನ್ನು ಶಾಸಕರಾದ ಆರ್. ವಿ. ದೇಶಪಾಂಡೆ ಯವರು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮುಖಾಂತರ ಮಾಡಿದರು.
ಹಾಗೂ ಹಳಿಯಾಳ ಬೆಳೆಯುತ್ತಿರುವ ನಗರವಾಗಿದ್ದು ಈ ರೀತಿಯ ಅಂಗಡಿಗಳ ಅವಶ್ಯಕತೆಯಿದೆ ಈ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ಜನರಿಗೆ ಬೇಕಾದ ವಸ್ತುಗಳು ಸುಲಭವಾಗಿ ಸರಿಯಾದ ಬೆಲೆಯಲ್ಲಿ ಸಿಗುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಜರ್ ಬಸರೀಕಟ್ಟಿ , ರಾಮಕೃಷ್ಣ ಹೆಗಡೆ , ರಿವೀಶ್ ಹೆಗಡೆ, ಪ್ರಸಾದ ಹುಣಸ್ವಾಡ್ಕರ, ಅಲೀಮ್ ಬಸರಿಕಟ್ಟಿ, ರಘು ಆನೆಗುಂದಿ ಹಲವಾರು ಗಣ್ಯರು ನಾಗರಿಕರು ಭಾಗವಹಿಸಿದ್ದರು.
Haliyal News ; Join our whatsapp group
Leave a Comment