ಶಿರಸಿ : ಹಿಂಬದಿ ಚಕ್ರ ಪಂಕ್ಚರ್ ಆಗಿ ಓಮ್ನಿ ಪಲ್ಟಿಯಾದ ಘಟನೆ ಶಿರಸಿ – ಸಿದ್ದಾಪುರ ಮುಖ್ಯ ರಸ್ತೆಯ ಅಜ್ಜಿಬಳ ಬಳಿ ನಡೆದಿದೆ.
ಸಿದ್ದಾಪುರ ಕಡೆಯಿಂದ ಶಿರಸಿಗೆ ಬರುತ್ತಿದ್ದ ಓಮಿನಿ ಕಾರ್ ನ ಹಿಂಬದಿ ಚಕ್ರ ಪಂಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸೇರಿ ಈರ್ವರಿಗೆ ಗಾಯಗಳಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗಮಿಸಿದ 112 ಪೊಲೀಸರು. ಗಾಯಾಳುಗಳನ್ನು 112 ವಾಹನದಲ್ಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳು ಶಿರಸಿ ಮೂಲದವರು ಎಂದು ತಿಳಿದುಬಂದಿದೆ.
Leave a Comment