ಭಟ್ಕಳ: ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಚಲಿಸುತ್ತಿದ್ದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಹೆಬಳೆ ಬೇಲಿಗದ್ದೆ ಒಂದನೇ ಕ್ರಾಸ್ ಸಮೀಪ ನಡೆದಿದೆ.

ಮೃತ ಯುವಕನನ್ನು ಗಣೇಶ ಜಟ್ಟಾ ನಾಯ್ಕ ಮುಂಡಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಆರೋಪಿ ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕ ಗಣಪತಿ ನಾಯ್ಕ ಭಟ್ಕಳ ಕಡೆಯಿಂದ ತೆಂಗಿನಗುಂಡಿ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಆಟೋವನ್ನು ಚಲಾಯಿಸಿಕೊಂಡು ಬಂದವನು ವೇಗವನ್ನು ನಿಯಂತ್ರಿಸಲಾಗದೆ ಹೆಬಳೆ ಬೇಲೆಗದ್ದೆ ಒಂದನೇ ಕ್ರಾಸ್ ಸಮೀಪ ತೆಂಗಿನಗುಂಡಿ ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ದಿನೇಶ ನಾಯ್ಕ ಈತನಿಗೆ ಹಣೆ ಭಾಗಕ್ಕೆ ಮತ್ತು ಕೈ ಬೆರಳಿಗೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದ್ದು ಸ್ಕೂಟಿಯ ಹಿಂಬದಿ ಸವಾರ ಗಣೇಶ ನಾಯ್ಕ ಈತನಿಗೆ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಪೆಟ್ಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದ ವೇಳೆ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಯುವಕ ಸಾವನ್ನಪ್ಪಿದ್ದಾನೆ.
ಈ ಕುರಿತು ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ಸುದ್ದಿಗಾಗಿ ಈ ಗ್ರುಪ್ ಸೇರಿ ;
Bhatkal News ; Join our whatsapp group
Leave a Comment