ಉಡಪಿ : ಇಲ್ಲಿನ ಸಂತೆಕಟ್ಟೆ ಬಳಿ ಬುಧವಾರ ಮುಂಜಾನೆ ಅಪಘಾತ ನಡೆದಿದ್ದು ಯುವತಿ ಮತ್ತು ಆಕೆಯ ತಂದೆ ಸಾವನ್ನಪ್ಪಿದ್ದಾರೆ. ಯುವತಿಯನ್ನು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ.
ಅವರು ಹುಬ್ಬಳ್ಳಿಯಿಂದ ಆಗಮಿಸಿದ್ದು, ಅವರನ್ನು ಕರೆದುಕೊಂಡು ಹೋಗಲು ತಂದೆ ಟಿ. ಗಣೇಶ್ ಪೈ ತನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಆನಂತರ ಹಿಂತಿರುಗುವ ವೇಳೆ ಉಡಪಿಯಿಂದ ಸಂತೆಕಟ್ಟೆಗೆ ತೆರಳುತ್ತದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕರಾವಳಿ ಮೀಸಲು ಪಡೆಯಲ್ಲಿ ಕರ್ಯನಿರ್ವಹಿಸುತ್ತಿರುವ ತಂದೆ ಗಣೇಶ್ ಪೈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಡಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment