ವಾಷಿಂಗ್ಟನ್ : ಸೂರತ್ ಮೂಲದ ಸತೀಶ್ ಕುಂಭಾನಿ ಎಂಬಾತ ಜಾಗತಿಕ ಹೂಡಿಕೆದಾರರಿಗೆ ಕ್ರಿಪ್ಟೋ ಕೆರನ್ಸಿ ಹೆಸರಲ್ಲಿ ಮಾಡಿರುವ ವಂಚನೆಗಾಗಿ ಅಮೆರಿಕದ ಸ್ಯಾನ್ ಡೀಗೋದಲ್ಲಿನ ನ್ಯಾಯಾಲಯ ದೋಷಾರೋಪಣೆ ಮಾಡಿದೆ.
ಎಫ್ ಬಿಐ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ಬಿಟ್‌ಕನೆಕ್ಟ್ ಸ್ಥಾಪಕ ಸತೀಶ್ ಕುಂಭಾನಿ ಮತ್ತು ಇತರ ಸಂಚುಕೋರರು ಹೂಡಿಕೆದಾರರಿಗೆ ಸುಳ್ಳು ಮಾಹಿತಿ ನೀಡಿ ೨.೪ ಬಿಲಿಯನ್ ಡಾಲರ್ (೧೮೧೮ ಕೋಟಿ ರೂ. ಗಳಿಗೆ ಹೆಚ್ಚ) ಹಣ ಸಂಗ್ರಹಿಸಿದ್ದಾರೆ. ಬಿಟ್‌ಕನೆಕ್ಟ್ ಒಂದು ವಂಚನಾ ಸಂಸ್ಥೆಯಾಗಿದ್ದು, ಮೊದಮೊದಲು ಹೂಡಿಕೆದಾರರಿಗೆ ನಂತರದ ಹೂಡಿಕೆದಾರರಿಂದ ಸಂಗ್ರಹಿಸಿದ ಹಣ ನೀಡಿ ಪ್ರಚಾರ ತೆಗೆದುಕೊಂಡಿತ್ತು.
ನಂತರ ಹೂಡಿಕೆದಾರರಿಗೆ ಹಣ ನೀಡದೆ ಮೋಸ ಮಾಡಿತ್ತು. ಇದು ಬೆಟ್‌ಕನೆಕ್ಟ್ ಕಾಯಿನ್ (ಬಿಸಿಸಿ) ಎನ್ನುವ ಡಿಜಿಟಲ್ ಕರೆನ್ಸಿಯನ್ನು ಮಾರುಕಟ್ಟೆ ಬಿಟ್ಟಿತ್ತು.
ಒಂದು ವರ್ಷದವರೆಗೆ ಈ ಸಂಸ್ಥೆಯನ್ನು ನಡೆಸಿದ ನಂತರ ಪ್ರೊಮೋಟರ್‌ಗಳ ಮೂಲಕ ಬಿಟ್‌ಕಾಯಿನ್‌ಗರ ಕೃತಕ ಬೇಡಿಕೆ ಸೃಚ್ಟಿಸಿ ಬಿಸಿಸಿ ಬೆಲೆ ಏರುವಂತೆ ಮಾಡಿದ್ದ ಅಮೆರಿಕಾದಲ್ಲಿ ಹಣ ವಹಿವಾಟು ನಡೆಸಬೇಕಾದಲ್ಲಿ ಅಲ್ಲಿನ ಫೈನಾನ್ಶಿಯಲ್ ಕ್ರೆöÊಮ್ಸ್ ಎನ್ ಪೋರ್ಸ್ಮೆಂಟ್ ನೆಟ್ ವರ್ಕ್ (ಫಿನ್‌ಸೆನ್)ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ನಿಯಂತ್ರಕರಿAದ ತಪ್ಪಿಸಿಕೊಳ್ಳಲು ಬಿಸಿಸಿ ನೋಂದಣಿ ಮಾಡಕೊಂಡಿರಲಿಲ್ಲ. ಇದೊಂದು ದೊಡ್ಡ ಹಗರಣವಾಗಿದ್ದು ೨ ಶತಕೋಟಿ ಡಾರ‍್ಗಳಷ್ಟು ಹಣವನ್ನು ವಂಚನೆ ಮಾಡಲಾಗಿದೆ ಎಂದು ಜಸ್ಟಿಸ್ ಡಿಪಾರ್ಟ್ಮೆಂಟ್ ಅಸಿಸ್ಟೆಂಟ್ ಅಟಾರ್ನಿ ಜನರಲ್ ಕೆನ್ನೆತ್ ಎ. ಪೊಲೈಟ್ ನ್ಯಾಯಾಧೀಶರೆದುರು ವಾದ ಮಂಡಿಸಿದರು.
ಕ್ರಿಪ್ಟೋ ಕರೆನ್ಸಿಗಳು ಹೆಚ್ಚು ಜನಪ್ರಿಯವಾಗುತ್ತದ್ದು, ಹೆಚ್ಚು ಹೆಚ್ಚು ಜನ ಇದರಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಂಥವರನ್ನು ದುರುಪಯೋಗ ಪಡಿಸಿಕೊಂಡು ಕುಂಬಾನಿಯAಥವರು ವಂಚನಾ ಯೋಜನೆಗಳನ್ನು ತರುತ್ತಿದ್ದಾರೆ. ಕೆಲವೊಮ್ಮ ವ್ಯಾಲೆಟ್ಗಳಲ್ಲಿ ಹಣವನ್ನು ಕದಿಯಲಾಗುತ್ತದೆ ಎಂದರು.
Leave a Comment