ಹೊನ್ನಾವರ : ಟ್ಯಾಂಕರ್ ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ವಾಹನದ ಚಾಲಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಟ್ಯಾಂಕರ್ ಚಾಲಕ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವಾಗ ಲಾರಿ ಚಾಲಕ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವ ಏಕಮುಖ ಸಂಚಾರ ಇರುವ ರಾಷ್ಟಿçÃಯ ಹೆದ್ದಾರಿಯಲ್ಲಿ ಹೋಗದೇ ವಿರುದ್ಧ ದಿಕ್ಕಿನಲ್ಲಿ ಲಾರಿಯನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಎದುರು ಬರುತ್ತಿದ್ದ ಟ್ಯಾಂಕರ್ ಗೆ ಗುದ್ದಿದ್ದಾನೆ.
ಅಪಘಾತದಲ್ಲಿ ಟ್ಯಾಂಕರ್ ಚಾಲಕ ಜಯದೀಪ ಗೌಡ, ಲಾರಿ ಚಾಲಕ ಶರಣಪ್ಪ ನವಲಹಳ್ಳಿ ಗಾಯಗೊಂಡಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Leave a Comment