ನವದೆಹಲಿ : ವಾಹನಗಳ ಫಿಟ್ ನೆಸ್ ಪ್ರಮಾಣಪತ್ರದ ವ್ಯಾಲಿಡಿಟಿ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಇನ್ನು ಮುಂದೆ ವಾಹನಗಳ ಮೇಲೆ ಪ್ರದರ್ಶಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು 15 ವರ್ಷಗಳಿಗಿಂತ ಹಳೆಯದಾಗಿದ್ದು, ಫಿಟ್ ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸುತ್ತಿವೆ. ಆದರೆ ಇನ್ನು ಮುಂದೆ ಫಿಟ್ ನೆಸ್ ಪ್ರಮಾಣಪತ್ರಗಳಿಲ್ಲದ ಹಳೆಯ ವಾಹನಗಳು ರಸ್ತೆಯಲ್ಲಿ ಚಲಿಸಿದರೆ ಅವುಗಳನ್ನು ತಕ್ಷಣವೇ ರದ್ದು ಗೊಳಿಸಲಾಗುವುದು ಎಂದುಹೇಳಿದೆ.
ಕರಡು ನಿಯಮಗಳಲ್ಲಿ ಸೂಚಿಸಲಾದ ರೀತಿಯಲ್ಲಿ ಭಾರೀ ಮಧ್ಯಮ ಮತ್ತು ಲಘು ಸರಕುಗಳು ಅಥವಾ ಪ್ರಯಾಣಿಕ ವಾಹನಗಳ ಮೇಲೆ ಅವುಗಳನ್ನು ಪ್ರದರ್ಶಿಸಬೇಕಿದೆ. ವಿಂಡ್ ಸ್ಕಿçÃನ್ ನ ಎಡಗಡೆಯ ಮೇಲ್ಭಾಗದ ತುದಿಯಲ್ಲಿ ಇವುಗಳನ್ನು ಪ್ರದರ್ಶಿಸಬೇಕು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಆಟೋ – ರಿಕ್ಷಾ, ಇ- ರಿಕ್ಷಾ, ಇ-ಕಾರ್ಟ್ ಮತ್ತು ಕ್ವಾಡ್ರ್ ಸೈಕಲ್ಗಳಲ್ಲಿ ವಿಂಡ್ ಸ್ಕಿçನ್ನ ಎಡಭಾಗದ ಮೇಲಿನ ಅಂಚಿನಲ್ಲಿ ಫಿಟ್ನೆಸ್ ಪ್ಲೇಟ್ ಅಳವಡಿಸಬೇಕು. ಮೋಟಾರು ಸೈಕಲ್ಗಾದರೆ ಅದನ್ನು ವಾಹನದ ಎದ್ದು ಕಾಣುವ ಭಾಗದಲ್ಲಿ ಪ್ರದರ್ಶಿಸಬೇಕು.
ನಂಬರ್ ಪ್ಲೇಟ್ ಇರುವ ರೀತಿಯಲ್ಲಿಯೇ ಈ ಫಿಟ್ ನೆಸ್ ಪ್ಲೇಟ್ ಕೂಡ ಇರಲಿದ್ದು, ಅವುಗಳ ಮೇಲೆ ವಾಹನದ ಫಿಟ್ ನೆಸ್ ಮುಕ್ತಾಯಗೊಳ್ಳುವ ದಿನಾಂಕವನ್ನು ನಮೂದಿಸಲಾಗುತ್ತದೆ. ಏರಿಯಲ್ ಬೋಲ್ಡ್ ಸ್ಕಿçಪ್ಟ್ ಮಾದರಿಯಲ್ಲಿ ನೀಲಿ ಬಣ್ಣದ ಬ್ಯಾಕ್ ಗ್ರೌಂಡ್ ಇರುವ ಸ್ಟಿಕರ್ ಮೇಲೆ ಹಳದಿ ಬಣ್ಣದಲ್ಲಿ ಫಿಟ್ ನೆಸ್ ಫ್ಲೇಟ್ ತಯಾರಿಸಲಾಗುತ್ತದೆ.
Leave a Comment