ದಾಂಡೇಲಿ : ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಹೋ ಸ್ಟೇಯೋಂದರಿAದ ಸೈಕ್ಲಿಂಗ್ ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ.

ಛತ್ತಿಸಘಡ ರಾಜ್ಯದ ಮಹಾಸಮುಂದ ಪ್ರದೇಶದ ತ್ರಿಮೂರ್ತಿ ಕಾಲೋನಿಯ 25 ವರ್ಷ ವಯಸ್ಸಿನ ದೇವಿಕಾ ವಾಸವಾಣಿ ಮೃತಪಟ್ಟವರು. ಸ್ನೇಹಿತರ ಜೊತೆಗೆ ಜೊಯಿಡಾ ತಾಲ್ಲೂಕಿನ ಪ್ರವಾಸಕ್ಕೆಂದು ಬಂದಿದ್ದ ಅವರು, ತಾಲೂಕಿನ ಬಿರಂಪಾಲಿ ಗ್ರಾಮದ ಹಿಡನ್ ವ್ಯಾಲಿ ಹೋ ಸ್ಟೇಯ ಸೈಕಲನ್ನು ತೆಗೆದುಕೊಂಡು ಸೈಕ್ಲಿಂಗ್ ಮಾಡುತ್ತಾ ಅಕೋರ್ಡಾ ಗ್ರಾಮದ ಕಡೆಗೆ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಸೈಕಲ್ ಸ್ಕಿಡ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ತಲೆಗೆ ಗಂಬೀರ ಗಯವಾಗಿದೆ. ಗಾಯಗೊಂಡ ದೇವಿಕಾ ವಾಸವಾಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ – ಯ ಪಿಎಸೈ ಐ. ಆರ್. ಗಡ್ಡೇಕರ ಅವರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತಳ ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಗುರುವಾರ ಮೃತಳ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
Leave a Comment