ಹೊನ್ನಾವರ: ಮಾ. 8ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ. ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಕಂಪನಿಯವರು ತಾಂತ್ರಿಕ ಹುದ್ದೆಗಳಿಗಾಗಿ ಆಯ್ಕೆ ನಡೆಸಲಿದ್ದಾರೆ.
ಇದಕ್ಕೆ 2018, 2019, 2020, 2021 ರ ಅವಧಿಯಲ್ಲಿ ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ ಮತ್ತು ಬಿಇ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಆಸಕ್ತ ಅರ್ಹ ಪದವೀಧರರು ತಮ್ಮ – ರೆಸ್ಕೂಮ್, ಫೋಟೋ, ಆಧಾರ್ ಪ್ರತಿಯೊಂದಿಗೆ ಸಮಯಕ್ಕೆ ಸರಿಯಾಗಿ ಹಾಜಹಾಗಬಹುದು. ಆಸಕ್ತರು ಮಾ. 07ರೊಳಗೆ ನೋಂದಾಯಿಸಿಕೊಳ್ಳಲು ಪ್ರಾಚಾರ್ಯ ಡಾ. ವಿಜಯಲಕ್ಷ್ಮೀ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ. ಡಿ.ಎಲ್. ಹೆಬ್ಬಾರ-9448435061, ಡಾ. ಪಿ. ಎಂ. ಹೊನ್ನಾವರ- 9448153586 ಅವರನ್ನು ಸಂಪರ್ಕಿಸಬಹುದು.
Leave a Comment