ಓರ್ವ ನಾಪತ್ತೆ ಇನ್ನೋರ್ವ ಮಣಿಪಾಲಕ್ಕೆ
ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಈರ್ವರು ಯುವಕರು ಶರಾವತಿ ನದಿಯಲ್ಲಿ ಬಿದ್ದು, ಒಬ್ಬನನ್ನು ಮೀನುಗಾರರು ರಕ್ಷಣೆ ಮಾಡಲಾಗಿದೆ. ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಬ್ರೀಝಾ ಗೋವಾ ನೋಂದಾವಣೆ ಹೊಂದಿರುವ ಹಾಗೂ ಹೊನ್ನಾವರ ಕಾರು ಭಟ್ಕಳ ಕಡೆಯಿಂದ ಕಡೆಗೆ ಹೋಗುತ್ತಿದ್ದ ಎಫ್‌ಝೀ ಬೈಕ್‌ಗಳ ನಡುವೆ ಶರಾವತಿ ಸೇತುವೆ ಮೇಲೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಕಾಸರಕೋಡ್ ಅಕ್ಷಯ ತಾಂಡೇಲ್ ಹಾಗೂ ಸುನೀಲ್ ಮೇಸ್ತ ಶರಾವತಿ ನದಿಯಲ್ಲಿ ಬಿದ್ದಿದ್ದು, ಮೇಸ್ತನನ್ನು ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರು ರಕ್ಷಣೆ ಮಾಡಲಾಗಿದೆ.

ಮುಳುಗಿ ನಾಪತ್ತೆಯಾಗಿದ್ದಾನೆ. ಸುನೀಲ್ ಮೇಸ್ತನಿಗೆ ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ.

ಅಕ್ಷಯ ತಾಂಡೇಲನನ್ನು ಶರಾವತಿ ನದಿಯಲ್ಲಿ ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕಾರಣ ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಉಂಟಾಗಿತ್ತು. ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದರು.
Leave a Comment