ಕಾರವಾರ: ಧಾರವಾಡ ಕೃಷಿ ವಿಶ್ವವಿದ್ಯಾಲಯದಡಿಯಲ್ಲಿರುವ ಶಿರಸಿ ಅರಣ್ಯ ವಹಾವಿದ್ಯಾಲಯದಲ್ಲಿ ಅರಣ್ಯಬೇಸಾಯ ಮತ್ತು ಕೃಷಿ ಅರಣ್ಯಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಒಂದು ಸಹಾಯಕ ಪ್ರಾಧ್ಯಾಪಕ ಹುದ್ದೆಯ ತಾತ್ಕಾಲಿಕ ನೇಮಕಾತಿಗಾಗಿ ಮಾ.18ರಂದು ಮುಂಜಾನೆ 11 ಗಂಟೆಗೆ ನೇರ ಸಂದರ್ಶನ ನಡೆಯಲಿದೆ.
ಅರಣ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ನೆಟ್ ಮತ್ತು ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿ ಮಾನ್ಯತೆಯ ಸಂಶೋಧನಾ ಪತ್ರ ಹೊಂದಿರುವವರು ವಿದ್ಯಾರ್ಹತೆ ಹೊಂದಿರುವವರು ಸಂದರ್ಶನಕ್ಕ ಹಾಜರಾಗಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ತರತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಶಿರಸಿ ಅರಣ್ಯ ಮಹಾವಿದ್ಯಾಲಯ ಸ೦ಪರ್ಕಿಸಬಹುದಾಗದ ಎಂದು ಡೀನ್ ಎ.ಜಿ.ಕೊಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment