ಅಂಕೋಲಾ : ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿ ಕೊಠಡಿಯ ಛಾವಣಿಯ ಕಾಂಕ್ರೀಟ್ ಪದರು ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ದಾಖಲಿಸಲಾಗಿದೆ. ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ.

ಆದರೆ ಈ ವೇಳೆ ತರಗತಿಯು ಒಳಗೆ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರಿ ಅನಾಹುತವು ತಪ್ಪಿದಂತಾಗಿದೆ. ವಿದ್ಯಾರ್ಥಿಗಳು ಉಟ ಮಾಡುವ ತಟ್ಟೆಯಲ್ಲಿಯೂ ಮೇಲಿಂದ ಬಿದ್ದ ಸ್ಲಾನ್ ಪದರ ತುಂಬಿಕೊAಡಿದೆ. ಪದರ ಕುಸಿತದ ಹೊಡೆತಕ್ಕೆ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಕೆಲವು ಡೆಸ್ಕ್ ಗಳು ಮುರಿದರೆ, ಇನ್ನಷ್ಟು ತರಗತಿ ಒಳಗಡೆ ಚಿಲ್ಲಾಪಿಲ್ಲಿಯಾಗಿವೆ.

ಘಟನೆ ಕುರಿತಂತೆ ಹಲವು ವಿದ್ಯಾರ್ಥಿಗಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಬಹುತೇಕ ಎಲ್ಲಾ ಕೋಠಡಿಗಳ ಛಾವಣಿ ಭಾಗ ಕುಸಿಯುವ ಸ್ಥತಿಯಲ್ಲಿದ್ದು ತಹಶೀಲ್ದಾರ ಉದಯ ಕುಂಬಾರ, ತಾ,ಪಂ ಇಓ ಪರಶುರಾಮ ಸಾವಂತ, ಪಿಎಸ್ಐ ಪ್ರವೀಣ ಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷಿö್ಮÃ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ತಾಲೂಕಾ ಸ್ಪತ್ರೆಗೆ ಬೇಟಿ ನೀಡಿ ಮಕ್ಕಳಿಗೆ ಮತ್ತು ಪಾಲಕರಿಗೆ ಸಾಂತ್ವನ ಹೇಳಿದರು.
ವದರಿ ನೀಡಲು ಡಿಸಿ ಸೂಚನೆ
ಕಾರವಾರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾಧ್ಯಾಮಗಳೊಂದಿಗೆ ಮಾತನಾಡಿರುವ ಅವರು. ಸ್ಕಾö್ಯನಿಂಗ್ ನಲ್ಲಿ ಯಾವುದೇ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿಲ್ಲ ಎನ್ನುವುದು ತಿಳಿದಿಬಂದಿದೆ. ಶಾಳೆ 25 ವರ್ಷಗಳಷ್ಟು ಹಳೆಯ ಕಟ್ಟಡವಾಗಿದ್ದು, ಘಟನೆ ಸಂಭAದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇ ಊಟದ ಸಮಯವಾಗಿದರಿಂದ ಹೆಚ್ಚಿನ ಮಕ್ಕಳು ತರಗತಿಯಲ್ಲಿ ಇರಲಿಲ್ಲವಾದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅಪಘಡ ತಪ್ಪಿದಂತಾಗಿದೆ. ಎಂದಿದ್ದಾರೆ.
Leave a Comment