ಶಿರಸಿ: ಗೋಮಾಳ ಬೆಟ್ಟ ಭೂಮಿಗಳನ್ನು ಸರ್ವಜನಿಕ ವಲಯದಲ್ಲೇ ಇರಿಸಿಕೊಳ್ಳಬೇಕು. ಇವನ್ನು ಉದ್ಯಮಗಳಿಗೆ, ಖಾಸಗಿ ಸಂಘಸಂಸ್ಥೆಗಳಿಗೆ ಪರಭಾರೆ ಮಾಡಬಾರದು ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಮುಖ್ಯಮಂತ್ರಿ, ಸಭಾಧ್ಯಕ್ಷರು ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಅತಿಕ್ರಮಣವಾಗಿರುವ ಅಥವಾ ಪರಬಾರೆಯಾಗಿರುವ ಗೋಮಾಳಭೂಮಿಯನ್ನು ಪುನಃ ಹಸಿರೀಕರಣ ಮಾಡಲು ಸೂಕ್ತ ಕರ್ಯಕ್ರಮ ರೂಪಿಸಬೇಕು. ರ್ಕಾರವು ಎಲ್ಲೆಡೆ ಗೋಶಾಲೆಗಳನ್ನು ಸ್ಥಾಪಿಸಿರುವುದು ಸ್ವಾಗತರ್ಹ. ಇದಕ್ಕೆ ಪೂರಕವಾಗಿ ಆ ಪ್ರದೇಶಗಳಲ್ಲಿ ಗೋಮಾಳವನ್ನು ಗುರುತಿಸಿ ರಕ್ಷಿಸುವ ಯೋಜನೆಯನ್ನು ಪಶುಸಂಗೋಪನೆ ಇಲಾಖೆ ಮಾಡಬೇಕು, ಪ್ರತಿ ಊರಿನಲ್ಲೂ ಇರುವ ಗೋಮಾಳ ಸೊಪ್ಪಿನ ಬೆಟ್ಟ ಪ್ರದೇಶಗಳನ್ನು ಗುರುತಿಸಿ, ಅದನ್ನು ರಕ್ಷಿಸುವ ಯೋಜನೆಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕು ಎಂದು ಆಗಹಿಸಿದ್ದಾರೆ.
ರಾಜ್ಯದ ಎಲ್ಲೆಡೆ ಗ್ರಾಮ ಪಂಚಾಯತಗಳಲ್ಲಿ ‘ಜೀವವೈವಿಧ್ಯ ಕಾನೂನು’ ಅನ್ವಯ ಈಗಾಗಲೇ ಜೀವವೈವಿಧ್ಯ ನರ್ವಹಣಾ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಸಾಮೂಹಿಕ ಭೂಮಿಯನ್ನು ಗುರುತಿಸಿ, ಸಂರಕ್ಷಿಸುವ ಸೂಕ್ತ ನೀತಿ ಹಾಗೂ ಕರ್ಯಕ್ರಮಗಳನ್ನು ‘ಜೀವವೈವಿಧ್ಯ ನರ್ವಹಣಾ ಸಮಿತಿಗಳು’ ಜನಸಹಭಾಗಿತ್ವದಲ್ಲಿ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಕಾರ ಗ್ರಾಮೀಣರ ಬದುಕು ಕಾಯುವ ಮೂಲಸೆಲೆಗಳಲ್ಲೊಂದಾದ ‘ಹಸಿರು ಪುಪ್ಪಸ’ದಂತಿರುವ ಈ ಗೋಮಾಳ ಬೆಟ್ಟ ಭೂಮಿಯನ್ನು ಸರ್ಕಾರವು ರಕ್ಷಿಸಬೇಕಿದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
Leave a Comment