ಬೆಂಗಳೂರು : ಪೊಲೀಸ್ ಇಲಾಖೆಯಿಂದ 2022 – 23 ನೇ ಸಾಲಿನಲ್ಲಿ 1500 ಸಿವಿಲ್ ಪೊಲೀಸ್ ಕಾನ್ಸೆ÷್ಟÃಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದು .
ಡಿಜಿ ಐಜಿಪಿ ಕಾರ್ಯಾಲಯದಿಂದ ಈಗಾಗಲೇ ನೇಮಕಾತಿ ಘಟಕ್ಕೆ ಪತ್ರ ಬರೆಯಲಾಗಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಲಾಗಿದೆ.
ಏಪ್ರಿಲ್ 1 ರಿಂದ ನೇಮಕಾತಿ ಪ್ರಕ್ರಯೆ ಆರಂಭಿಸಲು ಸಿದ್ಧತೆ ಕೈಗೊಂಡಿದೆ 432 ಹುದ್ದೆಗಳನ್ನು ಹೈದರಾಬಾದ್ – ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
ಇತರೆ ವೃಂದಗಳ 1068 ಹುದ್ದೆಗಳಲ್ಲಿ ಬೆಂಗಳೂರುನಗರ 520,ಮೈಸೂರು 25, ಮಂಗಳೂರು 50, ಹುಬ್ಬಳ್ಳಿ – ದಾರವಾಡ 45, ಬೆಳಗಾವಿ 75, ಬೆಂಗಳೂರು ಜಿಲ್ಲೆ 60, ತುಮಕೂರು 45, ರಾಮನಗರ 30, ಶಿವಮೊಗ್ಗ 25, ದಕ್ಷಿಣ ಕನ್ನಡ 45 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿರುವ 432 ಹುದ್ದೆಗಳಲ್ಲಿ ಬೆಂಗಳೂರು ನಗರಕ್ಕೆ 73, ಬೆಂಗಳೂರು ರೈಲ್ವೆಸ್ 17, ಕಲಬುರ್ಗಿ ಜಿಲ್ಲೆ 10, ಬೀದರ್ 79, ಯಾದಗಿರಿ 75, ಬಳ್ಳಾರಿ ವಿಜಯನಗರ 107, ಕೊಪ್ಪಳ 38, ರಾಯಚೂರು 63 ಹುದ್ದೆಗಳನ್ನು ಮೀಸಲಾಗಿಡಲಾಗಿದೆ.
ರಾಜ್ಯ ಪೊಲೀಸ್ ಇಲಾಖೆ ವೆಬ್ ಸೈಟ್ ನಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.
Leave a Comment