
ಯಲ್ಲಾಪುರ: ಆರ್ ಎಸ್ ಎಸ್ ನ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಯವರು ಮಂಗಳವಾರ ಪೋಲಿಸ್ ಠಾಣೆಗೆ ತೆರಳಿ ಆವ್ಯಕ್ತಿಯ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪೋಲಿಸ ನಿರೀಕ್ಷಕ ಸುರೇಶ ಯಳ್ಳುರ ಅವರಿಗೆ ಮನವಿ ನೀಡಿದರು .
ಪಟ್ಟಣದ ಡಿ.ಟಿ ರಸ್ತೆಯ ನಿವಾಸಿ ಆರ್ ಎಸ್ ಎಸ್ ಸಂಘಟನೆಯ ಕಾರ್ಯಕರ್ತ ಸಿದ್ದಾರ್ಥ ನಂದೊಳ್ಳಿ ಮಠ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಿಂದೂ ಧಾರ್ಮಿಕತೆಗೆ ಸಂಬAಧಪಟ್ಟ ಚಿತ್ರವನ್ನು (ಶೇರ್)ಹಂಚಿಕೊAಡಿದ್ದಕ್ಕೆ ಅದಕ್ಕೆ ಪ್ರತಿಯಾಗಿ ಕಬೀರ ಶೇಖ ಎನ್ನುವವನು ಪಾಕಿಸ್ತಾನ ದ್ವಜದ ಚಿತ್ರ ಕಮೇಂಟನಲ್ಲಿ ಹಾಕಿ ವೈಯಕ್ತಿಕ ನಿಂದನೆ ಮಾಡಿ ಮನೆಗೆ ನುಗ್ಗಿ ಹೊಡೆದಾಟ ಮಾಡುವದಾಗಿ ಬೆದರಿಕೆ ಹಾಕಿದ್ದರಿಂದ ಸೌಹಾರ್ಧತೆ ಕದಡುವ ಉದ್ದೇಶದಿಂದ ಹಿಂದೂಗಳ ಭಾವನೆಗೆ ಧಕ್ಕೆ ತಂದು ಕೆರಳಿಸುವಂತೆ ಮಾಡಿದ್ದಾನೆ.
ಆ ವ್ಯಕ್ತಿಯ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಪರ ಸಂಘಟನೆಯವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಿ ಎಸ್ ಐ ಮಂಜುನಾಥ್ ಗೌಡರ್,ಸಂಘಟನೆಗಳ ಪ್ರಮುಖರಾದ ಗೋಪಾಲ ಕೃಷ್ಣ ಗಾಂವಕರ,ರಾಮು ನಾಯ್ಕ, ಸಿದ್ದಾರ್ಥ ನಂದೋಳ್ಳಿಮಠ,ಸೋಮೇಶ್ವರ ನಾಯ್ಕ, ಪ್ರದೀಪ ಯಲ್ಲಾಪುರಕರ, ಅನಂತ ಗಾಂವಕರ್, ವಿನೋದ ತಳೇಕರ, ಶಿವು ಕವಳಿ,ಮನೋಜ ನಾಯ್ಕ, ರಜತ ಬದ್ದಿ,ಶ್ರೀನಿವಾಸ ಗಾಂವಕರ,ರಾಮಕೃಷ್ಣ ಕವಡಿಕೇರಿ ಮುಂತಾದವರು ಇದ್ದರು.
Leave a Comment