ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು ಭಟ್ಕಳದಲ್ಲಿ ಅಪ್ಪು ಅಭಿಮಾನಿಗಳು ಥಿಯೇಟರ್ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಭಟ್ಕಳ ತಾಲ್ಲೂಕಿನ ಪುಷ್ಪಾಂಜಲಿ ಚಿತ್ರಮಂದಿರಕ್ಕೆ ಬೈಕ್ ರ್ಯಾಲಿ ಮೂಲಕ ಅಭಿಮಾನಿಗಳು ಆಗಮಿಸಿ ಚಿತ್ರಮಂದಿರದ ಮುಂಭಾಗ ಹಾಕಲಾದ ಪುನೀತ್ ರಾಜ್ ಕುಮಾರ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು .ಇದೇ ವೇಳೆ ಕರಾವಳಿ ಭಾಗದ ಹುಲಿ ಕುಣಿತ ಪ್ರದರ್ಶನ ಕೂಡ ಮಾಡಲಾಯಿತು .ಇಷ್ಟು ದಿನ ಖಾಲಿ ಹೊಡೆಯುತ್ತಿದ್ದು ಪುಷ್ಪಾಂಜಲಿ ಥಿಯೇಟರ್ ಎಂದು ಹೌಸ್ ಫುಲ್ ಆಗಿದ್ದು ಕಂಡು ಬಂತು .
ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ ಅಭಿಮಾನಿಗಳ ದಂಡೇ ಆಗಮಿಸಿತ್ತು. ಚಿತ್ರಮಂದಿರದ ಮುಂದೆ ಪಟಾಕಿ ಸದ್ದಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಜೇಮ್ಸ್ ಸಿನಿಮಾ ಬಿಡುಗಡೆಯ ಜೊತೆಗೆ ಇಂದು ಪುನೀತ್ ಹುಟ್ಟುಹಬ್ಬದಇರುವುದು ವಿಶೇಷ ಎನಿಸಿತ್ತು.
Leave a Comment