ಭಟ್ಕಳ: ಮೊಗೇರ ಸಮಾಜದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯೋರ್ವ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ ಈ ಹಿಂದಿನಂತೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ವತಿಯಿಂದ ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಮಿನಿವಿಧಾನಸೌಧದ ಎದುರು ಅನಿರ್ದಿಷ್ಟಾವಧಿಯ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಈ ಹಿನ್ನೆಲೆ ವೆಂಕಟಾಪುರದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಭಟ್ಕಳ ಶಂಸುದ್ದಿನ್ ಸರ್ಕಲ್ ತಲುಪುತ್ತಿದ್ದಂತೆ ತಾಲೂಕಿನ ಗಾಂಧಿ ನಗರದ ನಿವಾಸಿ ಉಮೇಶ ಮೊಗೇರ ಎಂಬಾತ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ್ದಾನೆ.
ನಂತರ ಇಬ್ಬರು ಯುವಕರು ಸರ್ಕಲ್ ಏರಿ ಆತನ ಕೈಯಲ್ಲಿದ್ದ ವಿಷದ ಬಾಟಲ್ ಕಸಿದುಕೊಂಡರು. ನಂತರ ಪೊಲೀಸ ಇಲಾಖೆ ಹಾಗೂ ಸಮಾಜದ ಮುಖಂಡರು ಆತನ ಮನವೊಲಿಸಿ ಉಮೇಶ ಮೊಗೇರನ್ನು ಶಂಸುದ್ದಿನ್ ಸರ್ಕಲ್ ನಿಂದ ಕೆಳಗೆ ಇಳಿಸಲಾಯಿತು .
Leave a Comment