ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸದೆ ಇದ್ದ ಕಾರಣಕ್ಕೆ ಕ್ರಿಪ್ಟೊ ಕರೆನ್ಸಿ ವಿನಿಮಯ ಸೇವೆ ಒದಗಿಸುವ 11 ಕಂಪನಿಗಳಿಂದ ಒಟ್ಟು 95.86 ಕೋಟಿ ವಸೂಲು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ದಂಡ ಮತ್ತು ಅದಕ್ಕೆ ವಿಧಿಸಿದ ಬಡ್ಡಿಯ ಮೊತ್ತ ಇದರಲ್ಲಿ ಸೇರಿದೆ. ಜನ್ಮಾಯ್ ಲ್ಯಾಬ್ಸ್, ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವೀಚ್ ಕುಬೇರ್, ಬೈಕಾಯಿನ್, ಯನೊಕಾಯಿನ್, ಫ್ಲಿಟ್ ಪೆ ವಿನಿಮಯ ಕೇಂದ್ರಗಳು ಕೂಡ ಜಿಎಸ್ ಟಿ ಪಾವತಿಸದೆ ಇದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದವು.
ಜೆಬ್ ಐಟಿ ಸರ್ವಿಸಸ್, ಸೆಕ್ಯುರ್ ಬಿಟ್ ಕಾಯಿನ್ ಟ್ರೇಡರ್ಸ್, ಗಿಯೊಟಸ್ ಟೆಕ್ನಾಲಜೀಸ್, ಅವ್ಲೆನ್ ಕ್ಯಾನ್ ಇನ್ನೊವೇಷನ್ಸ್ ಇಂಡಿಯಾ (ಜೆಬ್ಪೆ) ಮತ್ತು ಡಿಸಿಡಿಯಂ ಇಂಟರ್ನೆಟ್ ಲ್ಯಾಬ್ಸ್ ಕೂಡ ಜಿಎಸ್ಟಿ ಪಾವತಿಸಿರಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಕ್ರಿಪ್ಟೂ ಕರೆನ್ಸಿ ವಿನಿಮಯ ಕಂಪನಿಗಳು ಜಿಎಸ್ಟಿ ವಂಚನೆ ಎಸಗಿದ 11 ಪ್ರಕರಣಗಳು ಪತ್ತೆಯಾಗಿವೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
Leave a Comment