ಭಟ್ಕಳ: ಮುರ್ಡೇಶರ ಲಾಡ್ಜೊಂದರಲ್ಲಿ ಮಹಿಳೆಯೋರ್ವಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ, ಮಹಿಳೆಯನ್ನು ರಕ್ಷಿಸಿದ ಪ್ರಸಂಗ ನಡೆದಿದೆ.
ಭಟ್ಕಳ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ಮಧುಕುಮಾರ ದೇವೇಂದ್ರಪ್ಪ ಹಂಪಯ್ಯನಮಾಳಿಗೆ, ಗದಗ ರಸ್ತೆ, ಹುಬ್ಬಳ್ಳಿ ಹಾಗೂ ಕೇಶವ ನಾಗಯ್ಯ ನಾಯ್ಕ, ಮುರ್ಡೇಶ್ವರ ಇವರು ಕೂಡಿಕೊಂಡು ತಮ್ಮ ಲಾಭಕ್ಕೋಸ್ಕರ ದಾವಣಗೆರೆಯ ಗಾಂಧಿನಗರದ ಮಹಿಳೋರ್ವಳನ್ನು ಅವಳ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಆಕೆಯನ್ನು ಮುರ್ಡೇಶ್ವರಕ್ಕೆ ಕರೆಯಿಸಿ ಲಾಡ್ಜ್ನ ರೂಮಿನಲ್ಲಿರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ತಮ್ಮ ಲಾಭಕ್ಕೋಸ್ಕರ ಮಹಿಳೆಯನ್ನು ಲೈಂಗಿಕ ಶೋಷಣೆಗೊಳಪಡಿಸಿದ ಕುರಿತು ದೂರಿನಲ್ಲಿ ತಿಳಿಸಲಾಗಿದ್ದು ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ಪರಮಾನಂದ ಕೊಣ್ಣೂರ ಅವರು ಪ್ರಕರಣ ದಾಖಲಸಿಕೊಂಡು ತನಿಖೆ ನಡೆಸಿದ್ದಾರೆ.
Leave a Comment