ಕುಣಿಗಲ್ (ತುಮಕೂರು ಜಿಲ್ಲೆ): ತನಗಿಂತಲೂ ಸುಮಾರು 23 ವರ್ಷ ಹಿರಿಯನನ್ನು 25 ವರ್ಷದ ಯುವತಿ ವಿವಾಹವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಗಮನಸೆಳೆದಿದ್ದ ಈ ಜೋಡಿಯ ಪೈಕಿ ಪತಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇವರ ದಾಂಪತ್ಯ ಜೀವನ ಆರು ತಿಂಗಳಿಗೆ ದುರಂತ ಕಂಡಿದ್ದು ಮಾತ್ರ ವಿಪರ್ಯಾಸ.
ಅಕ್ಕಿಮರಿಪಾಳ್ಯದ ಶಂಕರಪ್ಪ(48) ನೇಣಿಗೆ ಶರಣಾದವರು. ಇವರ ಪತಿ ಮೇಘನಾ(25) ಮತ್ತು ಶಂಕರಪ್ಪನ ತಾಯಿ ರಂಗಮ್ಮನಡುವೆ ಕುಲಕ ಕಾರಣಕ್ಕೆ ಆಗಾಗ್ಗೆ ಜಗಳ ನಡೆಯುತ್ತಲೇ ಇದ್ದು, ಇವರಿಬ್ಬರಿಗೂ ಬುದ್ಧಿವಾದ ಹೇಳುವಲ್ಲಿ ಸೋತು ಬೇಸತ್ತಿದ್ದರು ಶಂಕರಪ್ಪ. ಈ ಮಧ್ಯೆ ಅತ್ತೆ, ಸೊಸೆ ನಡುವೆ ಜಗಳವಾಗುತ್ತಿದ್ದಾಗ ರೋಸಿಹೋದ ಶಂಕರಪ್ಪ ತಮ್ಮ ಜಮೀನಿನಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬAಧಿಸಿದAತೆ ಮೃತನ ತಾಯಿ ರಂಗಮ್ಮ, ತನ್ನ ಸೊಸೆ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಎಂದು ಪೀಡಿಸುತ್ತಲೇ ಇದ್ದ ಕಾರಣ ಮಗ ನೇಣಿಗೆ ಶರಣಾಗಿದ್ದಾನೆ. ಮಗನ ಸಾವಿಗೆ ಸೊಸೆಯೇ ಕಾರಣ ಎಂದು ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Leave a Comment