ಭಟ್ಕಳ : ಕಳೆದ ಮಾರ್ಚ 22 ರಂದು ನಗರದ ಪಶುಪತಿ ದೇವಸ್ಥಾನದ ರಸ್ತೆಯ ಹತ್ತರ ಇರುವ ಗುಡಿ ಜಟಕಾ ದೇವಸ್ಥಾನದ ಎದುರು ಅಳವಡಿಸಿದ್ದ ಸಿ.ಸಿ ಟಿ.ವಿ. ಕ್ಯಾಮೆರಾವನ್ನು ಕಿತ್ತು ಹಾನಿ ಪಡಿಸಿ ಮುಂಬಾಗಿಲ ಬೀಗ ಮೀಟಿ ಕಿಟಕಿಯ ಫೈಬರ್ ಒಡೆದು ಕಳವು ಮಾಡಲು ಯತ್ನಿಸಿದ್ದ ಇಬ್ಬರು ಬಾಲಕರನ್ನು (14 ವರ್ಷ ಹಾಗೂ 16 ವರ್ಷ) ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಮಾ. 22 ರಂದು ಬೆಳಗ್ಗೆ 9 ಗಂಟೆಯಿAದ ಸಂಜೆಯ 7 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇದೇ ಬಾಲಕರು ಅಂದು ತಾಲೂಕಿನ ಜಾಲಿ ಗ್ರಾಮದ ಸರಕಾರಿ ಐ.ಟಿ.ಐ. ಕಾಲೇಜಿನಲ್ಲಿ ಎದುರುಗಡೆಯಲ್ಲಿ ನಿವೈತ್ತ ನೌಕರ ನಾರಾಯಣ ಗಣಪಯ್ಯ ಗೊಂಡ ಹಡೀಲ್ ಎನ್ನುವವರು ನಿಲ್ಲಿಸಿಟ್ಟಿದ್ದ ಹೀರೋ ಹೋಂಡಾ ಸ್ಪೆ÷್ಲಂಡರ್ ಪ್ಲಸ್ ಮೋಟಾರ್ ಬೈಕನ್ನು ಕೂಡಾ ಕಳವು ಮಾಡಿದ್ದು ಬೈಕನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಇನ್ಸಪೆಕ್ಟರ್ ದವಾಕರ್ ಪಿ.ಎಂ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬಾಲಕರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಾರವಾರದ ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ.
- ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ KPSC recruitment 2023 Apply Online for Accounts Assistant
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts
- KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
- ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
- ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts
Leave a Comment