ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡಿಕೊಡುತ್ತೇವೆ ಎಂದು ನಂಬಿಸಿ 2.85 ಲಕ್ಷ ರೂ ವಂಚಿಸಲಾಗಿದೆ.
ನಗರದ ಎಸ್.ಎಂ. ಹುಲಮನಿ ಎಂಬುವರಿಗೆ ವಂಚಿಸಲಾಗಿದೆ. ವಿವಿಧ ಮಾಹಿತಿ ಪಡೆದಿರುವ ವಂಚಕರು ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸುವುದಾಗಿ ನಂಬಿಸಿ 98 ಸಾವಿರ ವಂಚನೆ ಮಾಡಿದ್ದಾರೆ. ನಗರದ ಭಾಗ್ಯಲಕ್ಷ್ಮೀ ಎಂಬುವವರಿಗೆ ವಂಚಿಸಲಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
Leave a Comment