ಹುಬ್ಬಳ್ಳಿ : ನಗರದ ಉದ್ಯಮಿಯೋಬ್ಬರಿಗೆ ಸಿಂಗಾಪುರದಲ್ಲಿ ಪ್ರಾಜೆಕ್ಟ್ ಕೂಡಿಸುವುದಾಗಿ ನಂಬಿಸಿ ಕಂಪನಿಯಲ್ಲಿ ಪಾರ್ಟನರ್ ಆಗಿದ್ದವರೇ 7.5 ಕೋಟಿ ರೂ ಮೋಸ ಮಾಡಿರುವ ಆರೋಪದಲ್ಲಿ ಮೇಲೆ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧಾರವಾಡದ ಅಮಿತ್ ಪ್ರಭು ಮತ್ತು ಅಂಕಿತಾ ಕಾಮತ್ ಹಾಗೂ ಬೆಂಗಳೂರು ಮೂಲದ ದೀಪಕ ಸುಂದರಾಜನ್ ಮತ್ತು ಹೈದರಾಬಾದ್ ಮೂಲದ ಶರಣಕುಮಾರ ಎಂಬುವರು ಮೋಸ ಮಾಡಿದ್ದಾರೆ ಎಂದು ನಗರದ ಉದ್ಯಮಿ ವಿನೋದ ರಾಠೋಡ ಎಂಬುವರು ದೂರು ದಾಖಲಿಸಿದ್ದಾರೆ.
ಪಾರ್ಟನರ್ ಗಳಿಂದಲೇ ಪಂಗನಾಮ !
ಇಲೆಕ್ಟುçಕಲ್ ಅಂಗಡಿ ನಡೆಸುತ್ತಿದ್ದ ಉದ್ಯಮಿ ಇತ್ತೀಚೆಗೆ ಕೊಪ್ಪೀಕರ್ ರಸ್ತೆಯಲ್ಲಿನ ಬಿಲ್ಡಿಂಗ್ ನಲ್ಲಿ ಸಾಫ್ಟವೇರ್ ಮತ್ತು ಐಟಿ ಕಂಪನಿ ಓಪನ್ ಮಾಡಿದ್ದಾರೆ . ಇದರಲ್ಲಿ ಆರೋಪಿತರಾದ ಅಮಿತ್ ಮತ್ತು ಅಂಕಿತಾ ಅವರು ಕೂಡ ಪಾರ್ಟನರ್ ಇದ್ದಾರೆ. ಇಬ್ಬರು ಸೇರಿ ವಿನೋದ್ ಗೆ 2019 ರಲ್ಲಿ ಸಿಂಗಾಪುರದಲ್ಲಿ ಒಂದು ಪ್ರಾಜೆಕ್ಟ್ ಅಪ್ರೂವಲ್ ಆಗಲು 15 ಲಕ್ಷ ಬೇಕಾಗುತ್ತದೆ. ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ.
ನಂತರ ದೀಪಕ್ ಸುಂದರಾಜನ್ ಎಂಬುವರನ್ನು ಪರಿಚಯಿಸಿ ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಇವೆ ಎಂದು 6 ಲಕ್ಷ ಹಣ ಹಾಕಿಸಿದ್ದಾರೆ. ಮತ್ತೆ ಆ ಪ್ರಾಜೆಕ್ಟ್ ಅಪ್ರೂವಲ್ ಆಗಲು ಸಿಎಂಎಲ್ ಲೆವಲ್ 3 ಆಗಬೇಕು ಅದಕ್ಕೆ ಹಣ ಬೇಕು ಎಂದು 5.50 ಲಕ್ಷ ಹಾಕಿಕೊಂಡಿದ್ದಾರೆ. ಆದರೆ, ಯಾವುದೇ ಪ್ರಾಜೆಕ್ಟ್ ಕೂಡಿಸದೇ ದಿನ ದೂಡುತ್ತಾ ಬಂದಿದ್ದಾರೆ. ಇದೇ ರೀತಿ ಪ್ರಾಜೆಕ್ಟ್ ಗಾಗಿ 2019 ರಿಂದ 2020 ರವರೆಗೆ 3.50 ಕೋಟಿರೂ ಹಾಗೂ 100 ಜನ ಕೆಲಸಗಾರರಗೆ ವೇತನ, ನಾಲ್ವರು ಆರೋಪಿಗಳ ವಿಮಾನಯಾನ ವೆಚ್ಚ ಹೋಟೆಲ್ ಗೆ ಆರೋಪಿಗಳು ಹಣ ಖರ್ಚು ಮಾಡಿದ್ದಾರೆ ಎಂದು ದೂರಲಾಗಿದೆ.
ಪ್ರಾಕೆಕ್ಟ್ ಅಪ್ರೂವಲ್ ಮಾಡಿಸದೇ ಇರುವುದರಿಂದ ಬೇಸತ್ತ ವಿನೋದ ಮರಳಿ ಹಣ ನೀಡುವಂತೆ ಕೇಳಿದ್ದಾರೆ ಇದಕ್ಕೆ ಒಪ್ಪದ ಆರೋಪಿಗಳು ಮತ್ತೋಂದು ತಂತ್ರ ರೂಪಿಸಿದ್ದಾರೆ. 2020 ರ ಡಿಸೆಂಬರ್ ತಿಂಗಳಲ್ಲಿ 10 ಪ್ರಾಕೆಕ್ಟ್ ಸ್ಟಾರ್ಟ್ ಮಾಡುತ್ತೇವೆ. ಇಲ್ಲದಿದ್ದರೇ 7.50 ಕೋಟಿ ಎಂದು ಹೇಳಿದ್ದಾರೆ. ಆಗಲೂ ಯಾವುದೇ ಪ್ರಾಜೆಕ್ಟ್ ಅಪ್ರೂವಲ್ ಆಗದ ಕಾರಣ ಹಣ ಮರಳಿ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
- ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ KPSC recruitment 2023 Apply Online for Accounts Assistant
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts
- KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
- ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
- ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts
Leave a Comment