ಹುಬ್ಬಳ್ಳಿ: ತಮ್ಮ ವೈಯಕ್ತಿಕ ತೊಂದರೆ ಸಲುವಾಗಿ ಲೋನ್ಕ್ಯುಬ್, ಕ್ಲಿಯರ್ ಲೋನ್, ಕ್ಯಾಶಪಾರ್ಕ್, ಕ್ಯಾಶಬಾಸ್, ರೂಪಿ ಸ್ಟಾರ್ಟ್ ಆ್ಯಪ್ಗಳ ಮೂಲಕ 4.26 ಲಕ್ಷ ಲೋನ್ ಪಡೆದು ಮರಳಿ 25.20 ಲಕ್ಷ ತುಂಬಿದರೂ ಬ್ಯಾಂಕ್ ನೌಕರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ನಗರದ ರೋಹನ್ ಎಂಬುವರಿಗೆ ವಂಚಿಸಿದ್ದು, ಬೆದರಿಕೆ ಹಾಕಲಾಗಿದೆ. ದೂರುದಾರರು ವಿವಿಧ ಆ್ಯಪ್ಗಳ ಮೂಲಕ 4,26,654 ರೂ ಲೋನ್ ಪಡೆದಿದ್ದಾರೆ. ಇದನ್ನು ಮರಳಿ ತುಂಬಿದರೂ ಕಾಟ ಕೊಟ್ಟಿದ್ದರಿಂದ ಒಟ್ಟು 25.20 ಲಕ್ಷ ಹಣ ತುಂಬಿದ್ದಾರೆ.
ಇದಾದ ಮೇಲೂ ಬಿಡದ ವಂಚಕರು ವಿವಿಧ ಮೊಬೈಲ್ ನಂಬರ್ಗಳ ಮೂಲಕ ಸಂಬAಧಿಕರ ನಂಬರ್ಗಳಿಗೆ ಅಶ್ಲೀಲ ಸಂದೇಶ ಕಳಿಸಿ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment