ಕಾರವಾರ: ಸಾಂಪ್ರದಾಯಿಕ ಮೀನುಗಾರಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಯುವ ಮೀನುಗಾರರ ಸಂಘರ್ಷ ಸಮಿತಿ ಏಪ್ರಿಲ್ 17ರಂದು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿದೆ.
ನಗರದ ಸಚಿನ್ ಜ್ಯುವೆಲ್ಲರ್ಸ್ ಸ್ಪರ್ಧೆಯ ಪಾಯೋಜಕತ್ವ ವಹಿಸಿದೆ. ಈ ಸ್ಪರ್ಧೆಯು ಬೈತಖೋಲ್ ಮೀನುಗಾರಿಕೆ ಬಂದರು ಸಮೀಪವಿರುವ ಬ್ರೇಕ್‌ವಾಟರ್‌ನ ಎರಡೂ ದಂಡೆಯಲ್ಲಿ ನಡೆಯಲಿದೆ. ಸಾಮಾನ್ಯ ಗಾಳ ಮತ್ತು ರೇಡಿಯಂ ಗಾಳ ಎರಡು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು 250 ರೂ. ಪ್ರವೇಶ ಶುಲ್ಕದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಇದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಾಳ ಹಾಕುವ ಸ್ಪರ್ಧೆ ನಡೆಯಲಿದೆ. ಮೀನುಗಳ ಸಂಖ್ಯೆ ತೂಕದ ಆಧಾರದ ಮೇಲೆ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ. ಸಾಮಾನ್ಯ ಗಾಳ ಮತ್ತು ರೆಡಿಯಂ ಗಾಳ ಈ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸಾಮಾನ್ಯ ಗಾಳ ಹಾಕಿ ಮೀನು ಹಿಡಿಯುವವರಿಗೆ ಮೊದಲ ಬಹುಮಾನ 5 ಸಾವಿರ ರೂ., ಎರಡನೇ ಬಹುಮಾನ 2,500 ರೂ. ಮತ್ತು ಮೂರನೇ ಬಹುಮಾನ 1200 ರೂ. ಮತ್ತು ಟ್ರೋಫಿ ಇರಲಿದೆ. ರೇಡಿಯಂ ಗಾಳ ಹಾಕಿ ಮೀನು ಹಿಡಿಯುವ ವಿಭಾಗದಲ್ಲಿ ಮೊದಲ ಬಹುಮಾನ 4 ಸಾವಿರ ರೂ., ಎರಡನೇ ಬಹುಮಾನ 2 ಸಾವಿರ ಮತ್ತು ಮೂರನೇ ಬಹುಮಾನ ಸಾವಿರ ರೂ. ಹಾಗೂ ಟ್ರೋಫಿ, ಸ್ಪರ್ಧೆಗೆ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ಅವಿನಾಶ್ (ಮೊ.ಸಂ: 89701 94985), ಸಚಿನ್ (ಮೊ.ಸಂ: 97412 47750), ಶ್ರೀನಿವಾಸ ಅಂಬಿಗ (ಮೊ.ಸಂ: 918431 397983), ವಿಕ್ರಾಂತ ಅವರ್ಸೇಕರ (ಮೊ.ಸಂ: 98449 97738) ಅವರ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮದ ನಿಯಮಾವಳಿಗಳನ್ನು ಒಂದು ವಾರದ ಮುಂಚಿತವಾಗಿ ಪತ್ರಿಕೆಗಳ ಮೂಲಕ ತಿಳಿಸಲಾಗುವುದು ಎಂದು ಯುವ ಮೀನುಗಾರರ ಸಂಘರ್ಷ ಸಮಿತಿಯ ಅಧ್ಯಕ್ಷ ವಿನಾಯಕ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment