ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆ ತೆರಳಿದ ಬೋಟವೊಂದ ಭಟ್ಕಳ ಬಂದರ ಸಮೀಪದ ಕೋಟೆಗುಡ್ಡೆ ಸಮೀಪ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದ
ಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಸುಂದರ ಕೊಟ್ಯಾನ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಕುರಿತು ವರದಿಯಾಗಿದೆ.
ಮಾ.3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟು ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿಯಲ್ಲಿ ಮೀನುಗಾರಿಕೆಯನ್ನು ಮಾಡುತ್ತಿರುವಾಗ ಬೋಟಿನ ಅಡಿ ಭಾಗಕ್ಕೆ ಯಾವುದೋ ಒಂದು ಬಲವಾದ ವಸ್ತು ಡಿಕ್ಕಿ ಹೊಡೆದಿದ್ದರಿಂದ ಬೋಟಿನ ಅಡಿಭಾಗದಲ್ಲಿ ಒಟ್ಟೆಯಾಗಿ ನೀರು ಬರಲು ಪ್ರಾರಂಭವಾಗಿದ್ದು ತಕ್ಷಣ ಬೋಟಿನ ಚಾಲಕ ಅಳ್ವೇಕೋಡಿಯ ರವಿ ನಾಗಪ್ಪ ಮೊಗೇರ ಇವರು ಬೇರೆ ಬೋಟುಗಳನ್ನು ಕರೆದು ಅದಕ್ಕೆ ತಮ್ಮ ಬೋಟನ್ನು ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರಾದರೂ ಸಹ ಬೋಟಿನೊಳಗಡೆ ಜೋರಾಗಿ ನೀರು ಬರಲು ಆರಂಭವಾಗಿದ್ದರಿಂದ ಬೋಟು ಮುಳುಗಡೆಯಾಗಿದ್ದು.
ಬೋಟಿನಲ್ಲಿದ್ದ ಮೀನುಗಾರರಾದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ ಕಲ್ಲೇಶಿ ಇವರುಗಳನ್ನು ಬೇರೆ ಬೋಟಿನವರು ರಕ್ಷಣೆ ಮಾಡಿದ್ದು ಬೋಟಿನಲ್ಲಿದ್ದ ಕೆಲವು ವಸ್ತುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ. ಬೋಟು ಮುಳುಗಡೆಯಿಂದ ತಮಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment