ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ತರಾಸು ಅಭಿಮಾನಗಳ ಬಳಗದ ವತಿಯಿಂದ ತ.ರಾ.ಸುಬ್ಬರಾಯರ 102ನೆಯ ಜನ್ಮದಿನದ ಸವಿನೆನಪಿಗಾಗಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಾನು ಓದಿದ ತರಾಸು ಅವರ ಮೊದಲ ಕಾದಂಬರಿ’ ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ.
ತರಾಸು ಅವರು 68ಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದು, ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಪ್ರಬಂಧಗಳು 3000 ಶಬ್ದಗಳಲ್ಲಿ ಇರಬೇಕು. ಏಪ್ರಿಲ್ 15ರ ಒಳಗಾಗಿ ನುಡಿ ತಂತ್ರಾAಶದಲ್ಲಿ ಈ-ಮೇಲ್ [email protected] ಗೆ ಕಳುಹಿಸಬೇಕು.
ವಿಜೇತರಿಗೆ ಧಾರವಾಡದಲ್ಲಿ ಏ. 21ರಂದು ಜರುಗುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು. ಆಸಕ್ತರು ತಮ್ಮ ಹೆಸರು, ವಿಳಾಸ, ಪಿನ್ ಕೋಡ್, ಮೊಬೈಲ್ ನಂಬರ್ ಜತೆ ಆಧಾರ ಕಾರ್ಡ್ ಝರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರೊ. ಕೆ.ಎಸ್. ಕೌಜಲಗಿ, ಮೊ: 99451 45222 ಮತ್ತು ಡಾ.
ಬಿ.ಎಸ್. ಮಾಳವಾಡ ಮೊ: 94483 54805 ಸಂಪರ್ಕಿಸಬಹುದು ಎಂದು ಗೌರವಾಧ್ಯಕ್ಷ ಪ್ರೊ. ಇ.ವಿ. ಬಿಳೇಕಲ್ ತಿಳಿಸಿದ್ದಾರೆ.
- IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ
- ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job
- DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ
- 450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023
- ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ-ನಿವೇದಿತ್ ಆಳ್ವಾ
Leave a Comment