ಕಾರವಾರ : ನಗರದ ಕಳಸವಾಡದ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಜೊತೆಯಲ್ಲಿದ್ದ ಪ್ರಿಯಕರನೇ ಕೊಲೆ ಮಾಡಿರುವುದಾಗಿ ಪೊಲೀಸ್ ದೂರು ದಾಖಲಾಗಿದೆ.
ಮುಂಡಗೋಡ ತಾಲೂಕಿನ ಹನುಂತ ಸಿದ್ಧಿ ಹಾಗೂ ಮೂಲತಃ ಬಾಗಲಕೋಟೆಯ ಗಜೆಂದ್ರಗಡದ, ಹಾಲಿ ಕಾರವಾರದ ಮಖೇರಿಯ ಶಾಂತಾ ಗೌಡ ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಒಟ್ಟಿಗೆ ಕಳಸವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರೆನ್ನಲಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದಮಹಿಳೆ, ಗುರುವಾರ ಕೂಡ ಸಾರಾಯಿಗಾಗಿ ಹನುಮಂತನಿಗೆ ಪೀಡಿಸಿದ್ದಳು. ಇದರಿಂದಾಗಿ ಸಿಟ್ಟಿಗೆದ್ದ ಆತ ಕೋಪದಲ್ಲಿ ಆಕೆಯನ್ನು ದೂಡಿದ್ದಾನೆ. ದೂಡಿದ ರಭಸಕ್ಕೆ ಶಾಂತಾ ಗೌಡ ಮನೆಯ ಬಾಗಿಲಿನ ಮೆಟ್ಟಿಗೆ ಬಳಿ ಬಿದ್ದು ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ಸ್ಥಳದಲ್ಲೇ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಆದರೆ ಇದರಿಂದಾಗಿ ಕಂಗಾಲಾದ ಹನುಮಂತ, ತಾನಾಗಿಯೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ್ದ ಅಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿಸಿದಾಗ ಮಹಿಳೆ ಮೃತಪಟ್ಟಿದ್ದಳು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್, ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ, ನಗರ ಠಾಣೆಯ ಪಿಎಸ್‌ಐ ಸಂತೋಷಕುಮಾರ್ ಎಂ.., ಸಂಚಾರ ಠಾಣೆಯ ಪಿಎಸ್‌ಐ ನಾಗಪ್ಪ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲಿಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದರು. ಅಂಬ್ಯುಲೆನ್ಸ್ ಚಾಲಕ ಮಂಜುನಾಥ ಕೊಳಮಕರ್ ಈ ಬಗ್ಗೆ ಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment