ಶಿಗ್ಗಾವಿ : ತಾಲೂಕಿನಲ್ಲಿ ಗುರುವಾರ ಗಾಳಿ – ಮಳೆ ಸುರಿದಿದ್ದು, ಚಂದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟಿದ್ದಾನೆ.
ಮೃತ ಬಾಲಕನ್ನು ಮಾಲತೇಶ ರಾಮಣ್ಣ ಜಟೆಪ್ಪನವರ (16) ಎಂದು ಗುರುತಿಸಲಾಗಿದೆ. ಬಾಲಕ ಚಂದಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. ಇತ್ತೀಚೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ.
ಮಗನನ್ನು ಕಳೆದುಕೊಂಡ ಕುಟುಂಬದ ರೋದನ ಮುಗಿಲುಮುಟ್ಟಿದ್ದು, ಗ್ರಾಮದಾದ್ಯಂತ ದುಃಖ ಮಡುಗಟ್ಟಿದೆ.
Leave a Comment