ಹೊನ್ನಾವರ : ತಾಲೂಕಿನ ಶ್ರೀನಿಧಿ ಸೇವಾ ಮಾಹಿನಿ ವತಿಯಿಂದ ಬಾಳೆಗದ್ದೆ ಶ್ರಿವೆಂಕ್ರಟಮಣ ಸಭಾಭವನದಲ್ಲಿ ಏ.9 ರಂದು ಮಧ್ಯಾಹ್ನ 3.30 ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
2021-22 ನೇ ಸಾಲಿನ ಗಾಣಿಗ ಸಮಾಜದ ತಾಲೂಕಿನ ನಿವಾಸಿಗಳಾಗಿದ್ದು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ 90% ಅಧಿಕ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಗೌರವಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಜನಪದ ತಜ್ಞ ಪ್ರಶಸ್ತ ಪುರಸ್ಕೃತ ಡಾ.ಶ್ರೀಪಾದ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಡತೋಕಾ ಹಳೆಮಠದ ಫ್ರೌಢಶಾಲಾ ಶಿಕ್ಷಕ ಧರ್ಮೇಂದ್ರ ಹಳೇಮಠ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಆರ್.ಬಿ.ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೊನ್ನಾವರ ಪೊಲೀಸ್ ಠಾಣೆಯ ಎ.ಎಸ್.ಐ ಗಿರೀಶ ಶೆಟ್ಟಿ, ದೇವಾಲಯದ ಪ್ರಭಾರ ಅಧ್ಯಕ್ಷ ಕೆ.ಆರ್. ಶೆಟ್ಟಿ, ಕಾರ್ಯಧ್ಯಕ್ಷ ಎಸ್. .ಕೆ. ಶೆಟ್ಟಿ ಉಪಸ್ಥಿತರಿರುವರು. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
Leave a Comment