ಕುಮಟಾ : ಬಾಲಕಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಅಘನಾಶಿನಿ ನದಿಗೆ ಬಿದ್ದು ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ಸಂಭವಿಸಿದೆ. ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯ ಇಂದಿರಾ ಶಂಕರ ಗೌಡ (12) ಮೃತ ಬಾಲಕಿ.
ಈಕೆ ಅಡಿಕೆ ತೋಟಕ್ಕೆ ನೀರು ಹಾಯಿಸಲು ಅಘನಾಶಿನಿ ನದಿಗೆ ಜೋಡಿಸಿದ ನೀರಿನ ಪಂಪ್ ಜಾಲು ಮಾಡಲು ತೆರಳಿದ್ದಾಗ ಆಕ್ಮಸಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾಳೆ.
ಎಂದು ಆಕೆಯ ತಂದೆ ಶಂಕರ ಗೌಡ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment