ಮಂಗಳೂರು: ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರ ಪಾಲಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಐಟಿಕೆ ಬೀಚ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ. ಮೃತ ವೈಷ್ಣವಿ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಸಿಕ್ಕಿ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳೆಂದು ತಿಳಿದು ಬಂದಿದೆ.
ಇತ್ತೀಚೆಗೆ ನಿಧನರಾದ ವೆಂಕಟೇಶ್ ಅವರ ಮಾವನ ತಿಥಿಯ ಪಿಂಡ ಪ್ರಧಾನಕ್ಕೆಂದು ಕುಟುಂಬಿಕರು ಎನ್‌ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದು, ಪಿಂಡ ಪ್ರಧಾನ ಮಾಡಿದ ಬಳಿಕ ವೆಂಕಟೇಶ್ ಮಗಳು ವೈಷ್ಣವಿ ಹಾಗೂ ತಮ್ಮನ ಮಗಳು ತ್ರಿಶಾಳೊಂದಿಗೆ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ದೊಡ್ಡ ಅಲೆಯೊಂದರ ಹೊಡೆತಕ್ಕೆ ಸಿಲುಕಿ ವೆಂಕಟೇಶ್, ತ್ರಿಶಾ ಹಾಗೂ ವೈಷ್ಣವಿ ಸಮುದ್ರಪಾಲಾದರು.
ಈ ವೇಳೆ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಮತ್ತೋರ್ವ ಸ್ಥಳೀಯ ಯುವಕ ಸಮುದ್ರ ಪಾಲಾದವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ, ಮಾಹಿತಿ ಸಿಕ್ಕಿ ಸ್ಥಳಕ್ಕೆ ಧಾವಿಸಿದ್ದ ಸುರತ್ಕಲ್ ಠಾಣೆಯ ಹೊಯ್ಸಳ ವಾಹನದಲ್ಲಿ ಮುಕ್ತ ಶ್ರೀನಿವಾಸ ಆಸ್ಪತ್ರೆಗೆ ರವಾನಿಸಿದ್ದಾರೆ.
ಆದರೆ ದಾರಿಮಧ್ಯೆ ತ್ರಿಶಾ ಹಾಗೂ ವೈಷ್ಣವಿ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ ಚೇತರಿಸಿಕೊಂಡಿದ್ದಾರೆ. ವೈಷ್ಣವಿ ನಗರದ ಕಾಲೇಜೊಂದರಲ್ಲಿ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್‌ನಲ್ಲಿ ಬೆಂಗಳೂರಿನ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಈ ಸಂಬAಧ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ KPSC recruitment 2023 Apply Online for Accounts Assistant
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts
- KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
- ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
- ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts
Leave a Comment