ಭಟ್ಕಳ : ಮುರ್ಡೇಶ್ವರದ ಗೆಸ್ಟ್ ಹೌಸ್ ಒಂದಲ್ಲಿ ಕಳೆದ ಎಪ್ರಿಲ್ 1 ರಿಂದ ಉಳಿದುಕೊಂಡು ಬಂದಿದ್ದ ಕೇರಳದ ವ್ಯಕ್ತಿಯೋರ್ವ ಎ. 10ರ ರಾತ್ರಿಯಿಂದ ಎ. 11ರ ಮಧ್ಯಾಹ್ನದ ನಡುವೆ ಬಾತ್ ರೂಮಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.
ಕೇರಳದ ರಾಧಾಕೃಷ್ಣನ್ ಎ.ಯು. ತಂದೆ ಉನ್ನಿಕೃಷ್ಣನ್ (58) ಮೃತಪಟ್ಟವ ಎನ್ನಲಾಗಿದೆ. ಎಪ್ರಿಲ್ 1 ರಂದು ಒಂದು ರೂಮು ಬಾಡಿಗೆಗೆ ಪಡೆದಿದ್ದ ಈತ ದಿನಾಲೂ ಹೊರಗಡೆ ಹೋಗಿ ಬರುತ್ತಿದ್ದು ಎ. 10 ರಂದು 7.30ರ ಸುಮಾರಿಗೆ ರೂಮಿಗೆ ಬಂದವನೇ ಎ.11 ರಂದು ರೂಮು ಖಾಲಿ ಮಾಡುವುದಾಗಿ ಹೇಳಿದ್ದನೆನ್ನಲಾಗಿದೆ.
ಮಧ್ಯಾಹ್ನವಾದರೂ ರೂಮು ಖಾಲಿ ಮಾಡದೆ ಇರುವುದರಿಂದ ರೂಮಿನಲ್ಲಿ ಕೂಗಿ ಕರೆದಾಗ ಮಾತನಾಡದೇ ಇರುವುದನ್ನು ಗಮನಿಸಿ ರೂಮಿನ ಬಾಗಿಲು ತೆಗೆದು ನೋಡುವಾಗ ಬಾತ್ ರೂಮಿನಲ್ಲಿ ಅವರ ಶವ ಕಂಡುಬAತು ಎಂದು ಗೆಸ್ಟ್ ಹೌಸ್ ಮನೇಜರ್ ನಾಗರಾಜ ರಾಮಾ ನಾಯ್ಕ ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುರ್ಡೇಶ್ವರ ಪೊಲೀಸರು ತನಿಖೆ ನಡೆಸಿದ್ದಾರೆ.
Leave a Comment