ಹೊನ್ನಾವರ : ಪಟ್ಟಣ ವ್ಯಾಪ್ತಿಯ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಿವರಾಜ ಮೇಸ್ತ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಸತತ 18 ವರ್ಷದಿಂದ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಇವರು ಅನೇಕ ಸಂಧರ್ಭದಲ್ಲಿ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಹಲವು ರಾಷ್ಟಿçÃಯ ಹಬ್ಬಗಳಲ್ಲಿ ತಮ್ಮ ಸಂಘಟನೆಯ ಮೂಲಕ ಸಿಹಿ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹಿಂದು ಪರ ಸಂಘಟನೆಯ ಕಾರ್ಯಕರ್ತರಾಗಿ, ಮೀನುಗಾರ ಸಮಾಜದ ಪ್ರತಿನಿಧಿಯಾಗಿ, ದಂಡಿನದುರ್ಗಾ ದೇವಾಲಯ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಗಾಂಧಿನಗರ ಮಾರ್ಡನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತಿ ಹೆಚ್ಚಿನ ಮತ ಪಡೆದು ಆಯ್ಕೆಯಾಗಿರುದಲ್ಲದೇ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಆಟೋರಿಕ್ಷಾ ಚಾಲಕರ ಸಂಘದ ಮಹಾಸಭೆ ಪಟ್ಟಣದ ಶ್ರೀ ಮೂಡ ಗಣಪತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಶಿವರಾಜ ಮೇಸ್ತರವರು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಬಸ್ಟೆವ್ ಲೋಫೀಸ್ ಕಾರ್ಯದರ್ಶಿಯಾಗಿ ಪ್ರಕಾಶ ನಾಯ್ಕ ಖಜಾಂಚಿಯಾಗಿ ದಾಮೋದರ ನಾಯ್ಕ ಆಟೋ ಸ್ಟಾಂಡ್ ಮುಂದಾಳುಗಳಾಗಿ ಈಶ್ವರ್ ಮೇಸ್ತ, ಉದಯ್ ಮೇಸ್ತ ಪ್ರಶಾಂತ್ ಡಿಸೋಜ, ಶಶಿಕಾಂತ್ ಮೇಸ್ತ, ಚಂದ್ರಶೇಖರ ಮೇಸ್ತ, ಮಂಜುನಾಥ ಮೇಸ್ತ, ಉದಯ್ ಹರಿಜನ್, ಈಶ್ವರ್ ಬಿ ಮೇಸ್ತ, ಮಾಧವ್ ನಾಯ್ಕ, ಪ್ರಕಾಶ ಮೇಸ್ತ, ನಾರಾಯಣ ಮುಕ್ರಿ ಆಯ್ಕೆಯಾಗಿದ್ದಾರೆ.
Leave a Comment