ಹೊನ್ನಾವರ : ಪಟ್ಟಣದ ಗಂಧದ ಓಣಿ ಪ್ರಮೀಳಾ ವೈನ್ಸ್ ಎದುರಿನ ರಸ್ತೆಯ ಚರಂಡಿಯAತೂ ತ್ಯಾಜ್ಯ ಹಾಗೂ ತ್ಯಾಜ್ಯ ನೀರು ತುಂಬಿ ನಿಂತು ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ.
ಈಗ ಚರಂಡಿಯಲ್ಲಿ ಕಟ್ಟಿಕೊಂಡಿರುವ ನೀರು ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಈ ರಸ್ತೆಯ ನಿವಾಸಿಗಳು ದೂರುತ್ತಾರೆ. ಇಲ್ಲಿ ಸ್ವಚ್ಛತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

ಸ್ವಚ್ಛತೆಯ ವಿಚಾರದಲ್ಲಿ ನಾಗರೀಕ ಸಮಾಜದ ಜವಾಬ್ದಾರಿಯೂ ಅಷ್ಟೇ ಇದ್ದು, ಪ್ಲಾಸ್ಟಿಕ್ ವಗೈರೆಗಳನ್ನು ಚರಂಡಿಯಲ್ಲಿ ಚೆಲ್ಲುತ್ತಿರುವುದರಿಂದ ತ್ಯಾಜ್ಯ ಸರಾಗವಾಗಿ ಹರಿಯಲಾಗದೇ ನಿಂತಲ್ಲೇ ನಿಂತು ಗಬ್ಬು ನಾರುವಂತಾಗಿದೆ. ಒಟ್ಟಿನಲ್ಲಿ ಸ್ವಚ್ಛತೆಯ ವಿಚಾರದಲ್ಲಿ ಪಟ್ಟಣ ಪಂಚಾಯತ ವಿಶೇಷ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕಾಗಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿ, ದುರ್ವಾಸನೆ ಬೀರುತ್ತಿದೆ. ಸಂಬAಧಪಟ್ಟವರು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
ಸೊಳ್ಳೆ ಕಾಟ ಮತ್ತು ಕೊಳಚೆ ನೀರಿನಿಂದ ಸ್ಥಳೀಯ ನಿವಾಸಿಗಳ ಆರೋಗ್ಯ ಹದಗೆಡುತ್ತಿದ್ದು ಕೂಡಲೇ ಪಟ್ಟಣ ಪಂಚಾಯಿತಿ ನಿವಾಸಿಗಳು ಆಗ್ರಹಿಸಿದ್ದಾರೆ.
Leave a Comment