ಹುಬ್ಬಳ್ಳಿ : ಫ್ಲಿಪ್ ಕಾರ್ಟ್ ಪ್ರತಿನಿಧಿ ಎಂದು ನಂಬಿಸಿ, ಆರ್ಡ್ರ್ ಮಾಡಿದ ಮೆಟಿರಿಯಲ್ ಡೆಲಿವರಿ ಕೊಡಬೇಕು. ಆದರೆ, ವಿಳಾಸ ತಪ್ಪಾಗಿದೆ. ಸರಿ ಮಾಡಲು ಐದು ರೂ. ಆನ್ ಲೈನ್ ನಲ್ಲಿ ಫೆ ಮಾಡಿ ಎಂದು ವಿವಿಧ ಮಾಹಿತಿ ಪಡೆದು 89 ಸಾವಿರ ವಂಚಿಸಲಾಗಿದೆ.
ನಗರದ ಐ.ಎಲ್. ಬಿಜಾಪೂರ ಎಂಬುವರಿಗೆ ವಂಚಿಸಲಾಗಿದೆ. ದೂರುದಾರರಿಂದ ವಿವಿಧ ಮಾಹಿತಿ ಪಡೆದು ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಬ್ಯಾಂಕ್ ಕೆವೈಸಿ ಅಪಡೇಟ್ ಹೆಸರಿನಲ್ಲಿ ನಗರದ ಟಿ.ಎಂ ಡಿಸೋಜಾ ಎಂಬುವರಿAದ ವಿವಿಧ ಮಾಹಿತಿ ಪಡೆದು 50 ಸಾವಿರ ಮೋಸ ಮಾಡಲಾಗಿದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ಲ ತಿಳಿದುಕೊಳ್ಳಲು ಕರೆ ಮಾಡಿದ ಧಾರವಾಡದ ಯೋಗೇಶ ಹಿರೇಮಠ ಎಂಬುವರಿಗೆ ಎನಿಡೆಸ್ಕ್ ಡೌನಲೋಡ್ ಮಾಡಿಸಿ 61 ಸಾವಿರ ವಂಚನೆ ಮಾಡಲಾಗಿದೆ.
ಈ ಮೂರು ಪ್ರಕರಣಗಳ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೆöÊ ಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment