ಹುಬ್ಬಳ್ಳಿ: ಜಿಮ್‌ಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದು, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ನಗರದ ಶುಭಂ ಧಲಬಂಜನ ಎಂಬುವರ ಬೈಕ್, ಕಿತ್ತುಕೊಂಡು ಹೋಗಿದ್ದಾರೆ. ಮಹಿಳಾ ಕಾಲೇಜು ಹತ್ತಿರ ಇಬ್ಬರು ಅಪರಿಚಿತರು ಪೆಟ್ರೋಲ್ ಬೇಕು ಸಹಾಯ ಮಾಡಿ ಎಂದು ದೂರುದಾರರ ಗಾಡಿ ಹತ್ತಿ ಕುಳಿತಿದ್ದಾರೆ. ನಂತರ ಎರಡ್ಮೊರು ಪೆಟ್ರೋಲ್ ಬಂಕ್ ತಿರುಗಾಡಿಸಿ,
ನಂತರ ಗೋಕುಲ ರಸ್ತೆಯ ಪೆಟ್ರೋಲ್ ಬಂಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಾಕು ತೋರಿಸಿ ಗಾಡಿ ಬಿಟ್ಟು ಹೋಗು ಇಲ್ಲದಿದ್ದರೆ ಚಾಕು ಹಾಕುತ್ತೇವೆ ಎಂದು ಭಯ ಹುಟ್ಟಿಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment