ಬೆಳಗಿನ ಉಪಾಹಾರ ನೀಡಲಿಲ್ಲವೆಂದು ಕುಪಿತಗೊಂಡ 76 ವರ್ಷದ ವೃದ್ಧ ಸೊಸೆಯನ್ನು ಗುಂಡಿಟ್ಟು ಕೊಂದಿರುವ ಘಟನೆ ಮಹಾರಾಷ್ಟçದ ಥಾಣೆಯ ರಾಬೋಡಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಸೀಮಾ ಪಾಟೀಲ್ ಗುಂಡೇಟಿಗೆ ಬಲಿಯಾದವರು.
ಶುಕ್ರವಾರ ಬೆಳ್ಳಿಗೆ ಚಹಾ ಜೊತೆಯಲ್ಲಿ ಉಪಹಾರ ಕೊಟ್ಟಿಲ್ಲವೆಂದು ಸೊಸೆಯೊಂದಿಗೆ ವಾಗ್ವಾದಕ್ಕಿಳಿದ ಕಾಶಿನಾಥ ಪಾಂಡುರAಗ ಪಾಟೀಲರು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾರೆ. ರಾಬೋಡಿ ಪೊಲೀಸ್ ಠಾಣೆಯಲ್ಲಿ ತಲೆಮರೆಸಿಕೊಂಡಿದ್ದಾರೆ. ರಾಬೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment