ಸಿದ್ದಾಪುರ: ತವರು ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ಹೇಳಿ ಮಗುವಿನೊಂದಿಗೆ ಹೋದ ಮಹಿಳೆ ಗಂಡನ ಮನೆಗೂ ಹೋಗದೆ ತವರು ಮನೆಗೆ ಮನಃ ಬಾರದೆ ನಾಪತ್ತೆಯಾದ ಘಟನೆ ತಾಲೂಕಿನ ಕಾನಸೂರಿನಲ್ಲಿ ನಡೆದಿದೆ.
ಗೀತಾ ಮಹೇಶ್ ಹರಿಜನ (30) ಮತ್ತು ಶರತ್ ಮಹೇಶ್ ಹರಿಜನ್ (6) ಚಪ್ಪರಮನೆ ನಾಪತ್ತೆಯಾದವರು, ಗಂಡನೊAದಿಗೆ ಸುಖ ಸಂಸಾರ ನಡೆಸುತ್ತಿದ್ದ ಈಕೆಗೆ ಇತ್ತೀಚಿನ ದಿನಗಳಲ್ಲಿ ಗಂಡನಮನೆ ಹತ್ತಿರವಿರುವ ಹುಡುಗ ಕಿರಣ ಎನ್ನುವ ಹುಡುಗನ ಸಲುಗೆಯಾಗಿತ್ತು. ಎ. 11ರಂದು ತವರಿನಿಂದ (ಅರೇಹಳ್ಳದಿಂದ) ಗಂಡನ ಮನೆಗೆ ಹೋಗುವುದಾಗಿ ಹೇಳಿ ಹೋದವಳು ಗಂಡನ ಮನೆಗೂ ಹೋಗದೆ ತವರಿಗೂ ಬಾರದೆ ಮಗನೊಂದಿಗೆ ನಾಪತ್ತೆಯಾಗಿದ್ದು ಘಟನೆಗೆ ಸಂಬAಧಿಸಿದAತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Leave a Comment