ಭಟ್ಕಳ: ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮವನ್ನು ಕುಮಟಾ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗೋಕರ್ಣದ ವೇದಮೂರ್ತಿ ಗಜಾನನ ಕೃಷ್ಣ ಹಿರೇಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು
ನಟರಾಜ ಪೂಜೆ, ಗೆಜ್ಜೆ ಪೂಜೆ, ಗುರು ವಂದನ ನಡೆಯಿತು. ಭರತನಾಟ್ಯ ಮಾರ್ಗಪದ್ಧತಿಯಂತೆ ಕ್ರಮವಾಗಿ ಪುಷ್ಪಾಂಜಲಿ, ಅಲರಿಪು, ದೇವಿಸ್ತುತಿ, ವರ್ಣಂ, ದೇವರನಾಮ, ಶಿವಸ್ತುತಿ, ಜಾವಳಿ, ತಿಲ್ಲಾನಗಳನ್ನು ಪಲ್ಲವಿ ಮನೋಜ್ಞವಾಗಿ ಪ್ರಸ್ತುತಪಡಿಸಿದಳು.
ನಂತರ ಶಿರಸಿಯ ನೃತ್ಯ ಗುರು ಸೀಮಾ ಭಾಗ್ವತ ಅವರು ಮಾತನಾಡಿ, ‘ನಾವು ಕಲೆಯನ್ನು ಮೈಗೂಡಿಸಿಕೊಂಡರೆ ಅದು ನಮ್ಮಲ್ಲಿ ಸಂಸ್ಕಾರವನ್ನು ಮೈಗೂಡಿಸುತ್ತದೆ’ ಎಂದರು. ಡಾ.ನಮೃತಾ ಶಾನಭಾಗ ಅವರು ಸಾಧನೆಗೆ ಸತತ ಪರಿಶ್ರಮ ಹೇಗೆ ಪೂರಕ ಎಂದು ವಿವರಿಸಿದರು. ಕುಮಟಾದ ಏ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸೋಮಶೇಖರ್ ಗಾಂವ್ಕರ್ ‘ನಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಪಲ್ಲವಿ ಅವರಲ್ಲಿರುವ ವಿನಯವಂತಿಕೆ ಅವರನ್ನು ನೃತ್ಯಾ ಕಲಾ ಕ್ಷೇತ್ರದಲ್ಲಿ ಎತ್ರಕ್ಕೆ ಕೊಂಡೊಯ್ಯತ್ತಿದೆ’ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ನಮ್ರತಾ ಶಾನಭಾಗ ಹಾಗೂ
ಮುಖ್ಯ ಅತಿಥಿಗಳಾಗಿ ನೃತ್ಯ ಗುರು ವಿದುಷಿ ಸೀಮಾ ಭಾಗ್ವತ್ ಉಪಸ್ಥಿತರಿದ್ದರು
Leave a Comment