ಅಂಕೋಲಾ : ಅಕ್ರಮ ಮಧ್ಯ ಸಾಗಿಸುತ್ತಿದ್ದ ಪ್ರಕರಣವೊಂದರ ಆರೋಪಿಯಿಂದ ಅಬಕಾರಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ತಂಡ ದಾಳಿ ನಡೆಸಿ ಸಾಕ್ಷಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರೊಬೆಶನರಿ ಅಬಕಾರಿ ಸಬ್ ಇನ್ ಸ್ಪೆಕ್ಟರ್ ಪ್ರೀತಿ ರಾಥೋಡ ಅವರು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣ ವಿವರ : ಫೆಬ್ರುವರಿ 26 ರಂದು ತಾಲೂಕಿನ ಹಾರವಾಡ ಬಳಿ ಎರಡು ದ್ವಿಚಕ್ರ ವಾಹನದಲ್ಲಿ ಅಕ್ರಮ ಗೋವಾ ಸಾರಾಯಿ ಮತ್ತು ವಾಹನ ಸಮೇತ ರೂ. 1,10,830 ಮೌಲ್ಯದ ಮಾಲನ್ನು ಹಿಡಿದು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಕುರಿತು ಅಬಕಾರಿ ಅಧಿಕಾರಿ ಪ್ರೀತಿ ರಾಥೋಡ ಪ್ರಮುಖ ಆರೋಪಿ ಕಾರವಾರದ ಮುಷ್ತಾಕ್ ಹಸನ್ ಬೇಗ್ ಬಳಿ ಅಧಿಕ ಮೌಲ್ಯದ ಸಾರಾಯಿಗಳು ಸೇರಿದಂತೆ ರೂ. 50,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರೆನ್ನಲಾಗಿದೆ.
ಮುಸ್ತಾಕರವರು ಈ ಕುರಿತು ಕಾರವಾರ ಎಸಿಬಿಗೆ ಮಾಹಿತಿ ನೀಡಿದ್ದರು. ಬಳಿಕ ಎಸಿಬಿ ಡಿವೈಎಸ್ಪಿ ಪ್ರಕಾಶರವರು ತಂಡ ರಚಿಸಿಕೊಂಡು ದಾಳಿಗೆ ಸಿದ್ಧರಾಗಿ ಬಂದಿದ್ದಾರೆ. ಮೊದಲು ಮುಸ್ತಾಕ ಮಂಗಳವಾರ ಅಬಕಾರಿ ಕಚೇರಿಗೆ ಬಂದು ಡೀಲ್ ಕುದುರಿಸುತ್ತಿದ್ದಂತೆ ಕಚೇರಿಯಲ್ಲಿಯೇ ಲಂಚದ ಹಣದ ಒಂದು ಭಾಗವಾಗಿ 20,000 ಅಧಿಕಾರಿಗೆ ನೀಡುತ್ತಿರುವ ಸಂದರ್ಭದಲ್ಲಿಯೆ ಎಸಿಬಿ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲಂಚ ಪಡೆದ ಅಧಿಕಾರಿಯನ್ನು ಅಬಕಾರಿ ಇಲಾಖೆಯ ಕಚೇರಿಯಲ್ಲಿಯೇ ಸುಮಾರು 8 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಕಡತ ಸೇರಿದಂತೆ ವಿಚಾರಣೆ ನಡೆಸಿದ್ದಾರೆ.
Leave a Comment