ಅಂಕೋಲಾ : ಅಕ್ರಮವಾಗಿ ಮಧ್ಯ ಮಾರಾಟದ ಆರೋಪದ ಮೇರೆಗೆ ಪೊಲೀಸರು ತಾಲೂಕಿನ ಎರಡು ಕಡೆ ದಾಳಿ ನಡೆಸಿ, ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಹೊಟೇಲ್ ಸಮೃದ್ಧಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮಧ್ಯೆ ಮಾರಾಟ ಹಾಗೂ ಕುಡಿಯಲು ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಹೊಟೇಲ್ ಮಾಲೀಕ, ಬೇಳಾ ಬಂದರ್ ನಿವಾಸಿ ಅವಿನಾಶ ನಾಯ್ಕ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಸುಂಕಸಾಳ ಬಸ್ ನಿಲ್ದಾಣದ ಬಳಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಸುಂಕಸಾಳ ಗ್ರಾಮ ಪಂಚಾಯಿತಿ ಸದಸ್ಯೆ ನಮೀಜಾ ರಾಜಾಸಾಬ್ ಸೈಯದ್ ಮತ್ತು ಆಕೆಯ ಮಗ ನಾಸೀರುದ್ದೀನ ರಾಜಾಸಾಬ್ ಸೈಯದ್ ಮೇಲೆ ಪ್ರಕರಣ ದಾಖಲಿಸಿ, ವಿವಿಧ ಬ್ರಾö್ಯಂಡ್ ಗಳ ಮಧ್ಯ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಉಪನಿರೀಕ್ಷಕ ಪ್ರವಿಣಕುಮಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment