ಶಿರಸಿ: ಸತತ ಪಠ್ಯ ಹಾಗೂ ಪತ್ಯೇತರದ ಬಹುಮುಖ ಸೃಜನಶೀಲ ಸಾಧನೆಯ ಸುದ್ದಿಯಲ್ಲಿರುವ ಶಿರಸಿ ಲಯನ್ಸ ಶಾಲೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ, ಶಿರಸಿ ಲಯನ್ಸ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ 11ನೇ ಅಖಿಲ ಭಾರತ ಮಟ್ಟದ ಅಂತರ ಶಾಲಾ ಸ್ಪರ್ಧೆಯಲ್ಲಿ ದಕ್ಷಿಣ ವಲಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ.
ಬಹುಮುಖ ಪ್ರತಿಭೆಯಗಿರುವ ಅನನ್ಯಾ ಈ ಹಿಂದೆ ಕೂಡಾ ಅಸಾಧಾರಣ ಭಾಲಪ್ರತಿಭೆ ಬಹುಮುಖ ವಿದ್ಯಾರ್ಥಿ ಪ್ರತಿಭೆ ಕರುನಾಡ ಕಲಾಕುಸುಮ ಇಂತಹ ಹಲವಾರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವದನ್ನು ಇಲ್ಲಿ ಸ್ಮರಿಸಬಹುದು.

ರೂಟ್ 2 ರೂಟ್ ಹಾಗೂ ವಿರ್ಸಾ ಸಂಸ್ಥೆ ಆನ್ ಲೈನ್ ಮೂಲಕ 14ಕ್ಕೂ ಹೆಚ್ಚು ಸಾಂಸ್ಕೃತಿಕ ವಿಭಾಗಗಳ ಅಂತರ್ಜಾಲ ತರಬೇತಿ ತರಗತಿಗಳನ್ನು ನಡೆಸುತ್ತಿದೆ.
ಇದೇ ಸಂಸ್ಥೆ ಆನ್‌ಲೈನ್ ಮೂಲಕ ಸಂಘಟಿಸಿದ ಅಖಿಲ ಭಾರತ ಮಟ್ಟದ ಅಂತರಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಅನನ್ಯಾ ವಿಜೇತಳಾಗಿ ರಾಷ್ಟ್ರಮಟ್ಟದಲ್ಲಿ ಶಿರಸಿ ಲಯನ್ಸ ಶಾಲೆಯ ಹೆಸರನ್ನು ಮೆರೆಸಿದ್ದಾಳೆ.
ದೇಶದ ಹಲವಾರು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಶಿರಸಿ ನಗರದ ಲಯನ್ಸ ಶಾಲೆಯ ಬಾಲಕಿ ಈ ಪ್ರಶಸ್ತಿಗೆ ಭಾಜನರಾಗಿರುವುದು ತುಂಬಾ ಹೆಮ್ಮೆಯ ಸಂಗತಿ. ಇದು ಶಿರಸಿ ನಗರಕ್ಕೂ ಹೆಮ್ಮೆಯ ಸಂಗತಿ. ಕುಮಾರಿ ಅನನ್ಯಾ ಲಯನ್ಸ ಸದಸ್ಯರಾದ ಲಯನ್ ಅಶ್ವತ್ಥ ಹೆಗಡೆ, ಲಯನ್ ಜ್ಯೋತಿ ಹೆಗಡೆ ದಂಪತಿಯ ಪುತ್ರಿ.
- SSLC ITI ಆದವರಿಗೆ BSF ನೇಮಕಾತಿ 2023 BSF new Recruitment 2023 Apply Online for Constable posts
- SSLC ಪದವಿ ಆದವರಿಗೆ ಕೆಎಂಎಫ್ ಶಿಮುಲ್ ನೇಮಕಾತಿ 2023 KMF SHIMUL new recruitment 2023 Apply Online
- 10th NTC ಆದವರಿಗೆ ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2023 Rail Wheel Factory new Recruitment 2023 Apply for apprentice Posts
- ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುತಾತ್ಮರ ದಿನಾಚರಣೆ ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ರಾಹುಲ್ ನೇತ್ರತ್ವದ ಭಾರತ್ ಜೋಡೋ ಯಶಸ್ವಿ -ಜಗದೀಪ್ ಎನ್ ತೆಂಗೇರಿ
- SSLC ಆದವರಿಗೆ ಭಾರತೀಯ ನೌಕಾಪಡೆಯ ನೇಮಕಾತಿ 2023 Indian Navy new Recruitment 2023 Apply Online for Tradesman Skilled Posts
Leave a Comment