ಶಿರಸಿ : ಸರ್ಕಾರಿ ಕಾಯಂ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಿ ನಗ್ನ ವಿಡಿಯೋ ಮಾಡಿ ಬ್ಲಾö್ಯಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿದ್ದ 4 ನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ರಫಿಕ್ ಸಾಗರ ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಧಿಸಿದAತೆ ಅಜಿತ್ ನಾಡಿಗ್, ಧನುಶ್ಯ ಕುಮಾರ ಶೆಟ್ಟಿ, ಪದ್ಮಜಾ ಎಂಬುವರನ್ನು ಬಂಧಿಸಲಾಗಿತ್ತು.
ಆರೋಪಿಗಳೆಲ್ಲರೂ ಸೇರಿ ಕಳೆದ ಜ.17 ರಂದು ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕಾಯಂ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ಹೇಳಿ ಶಿವಮೊಗ್ಗ ಕ್ಕೆ ಕೆರೆದೊಯ್ದ ಅಲ್ಲಿ ಕೋಣೆಯೊಂದರಲ್ಲಿ ಕೊಡಿ ಹಾಕಿ ಅವರ ನಗ್ನ ವಿಡಿಯೋ ಮಾಡಿ 15 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದರು. ಅಲ್ಲದೇ ಭದ್ರತೆಗಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದರು ಎಂದು ಫೆ. 2 ರಂದು ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
Leave a Comment