ಕಾರವಾರ : ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.28 ರ ಬೆಳ್ಳಿಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಮಿನಿ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ.
ಸಂದರ್ಶನದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಡಿಪ್ಲೋಮಾ, ಐ.ಟಿ.ಐ ಮತ್ತು ಇತರೆ ಟ್ರೇಡ್‌ಗಳು, ಬಿ – ಫಾರ್ಮ, ಡಿ-ಫಾರ್ಮ ಹಾಗೂ ಎಮ್ – ಫಾರ್ಮ ತೇರ್ಗಡೆಯಾದವರು ರೆಸ್ಯೂಮ್, ಆಧಾರ್ ಕಾರ್ಡ್, ಪೋಟೋ ಪ್ರತಿಯೊಂದಿಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9481403800, 9743360656 ಅಥವಾ ಕಚೇರಿ ದೂರವಾಣಿ ಸಂಖ್ಯೆ : 08382226386ಗೆ ಸಂಪರ್ಕಿಸಬಹುದು ಎಂದು ಯೋಜನಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment