ಸಿದ್ದಾಪುರ : ತಾಲೂಕಿನ ತಂಡಾಗುAಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದ ಮೇಲೆ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪಿಎಸ್‌ಐ ಎಂ.ಜಿ. ಕುಂಬಾರ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜುನಾಥ ಮಾಸ್ತಾö್ಯ ಗೌಡ, ಮಹಾಬಲೇಶ್ವರ ರಾಮಾ ಗೌಡ, ಪರಮೇಶ್ವರ ಗಣಪತಿ ಗೌಡ, ಶಿವರಾಮ ನಾಗು ಗೌಡ, ರಾಜಕುಮಾರ ಮಸ್ತಾö್ಯ ಗೌಡ, ಅಣ್ಣಪ್ಪ ಲಕ್ಷö್ಮಣ ಗೌಡ ಇವರುಗಳನ್ನು ಹಾಗೂ ನಗದು 3500 ರೂ. 4 ಮೊಬೈಲ್‌ಗಳು, ಮೂರು ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿದೆ.
ಅದೇ ರೀತಿ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಅನಂತ ಪುಟ್ಟಾ ನಾಯ್ಕ ಹಾಗೂ ಕೊಪ್ಪಲಕೇರಿ ದೊಡ್ಮನೆಯಲ್ಲಿ ಅನದಿಕೃತವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಶ್ರೀಧರ ತಿಮ್ಮಾ ಹಸ್ಲರ್ ಅವರುಗಳ ಮೇಲೆ ಹಠಾತ್ ದಾಳಿ ನಡೆಸಿದ ಪಿಎಸ್‌ಐ ಎಂ.ಜಿ.ಕುAಬಾರ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
Leave a Comment