ಭಟ್ಕಳ : ಮನೆಯ ಹಿಂಬದಿಯ ಚಾವಣೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ತಾಲೂಕಿನ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದಿದೆ.
ದುರ್ಗಮ್ಮ ಮೋಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆ ಹಿಂಬದಿಯ ಚಾವಣಿಯ ಹಂಚು ಕಿತ್ತು ಕೋಣೆಯ ಒಳನುಗ್ಗಿದ ಕಳ್ಳರು ಕಪಾಟಿನ ಚಾವಿ ಬಳಸಿ 2 ಲಕ್ಷಿö್ಮÃ ಸರ, 4 ಉಂಗುರ, 1ಚೈನ್, 25,000 ನಗದು, 2 ಪಾನ್ ಕಾರ್ಡ್, 2 ಆಧಾರ್ ಕಾರ್ಡ್ 3 ಎಟಿಎಮ್ ಕಾರ್ಡ್, ಚಾಲನಾ ಪ್ರಮಾಣ ಪತ್ರ ಮತ್ತು ಬೈಕ್ ದಾಖಲಾತಿಗಳನ್ನ ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಮುಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಪಿಎಸೈ ದೇವರಾಜ್ ಎಸ್, ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ, ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.
Leave a Comment