ಹೊನ್ನಾವರ : ವಾಹನ ತಪಾಸಣೆ ವೇಳೆ ಒಮಿನಿ ವಾಹನದಲ್ಲಿ ಅಕ್ರಮವಾಗಿ 150 ಕೆ.ಜಿ ಗೋಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ವಾಹನ ಸಮೇತ ಗೋಮಾಂಸ ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಓಮಿನಿ ವಾಹನದಲ್ಲಿ ಅಂದಾಜು 27000 ರೂ ಮೌಲ್ಯದ ಸುಮಾರು 150 ಕೆ.ಜಿ ಮಾಂಸವನ್ನು ತುಂಬಿ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿಕೊAಡು ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಓಮಿನಿ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ.
ತಾಲೂಕಿನ ಕುಳಕೋಡ ಕ್ರಾಸ್ ಹತ್ತಿರ ರಾಷ್ಟಿçÃಯ ಹೆದ್ದಾರಿ 69 ರ ಮೇಲೆ ಬರ ಹೋಗುವ ವಾಹನಗಳ ತಪಾಸಣೆ ಕಾಲಕ್ಕೆ ಪೊಲೀಸರು ಓಮಿನಿ ವಾಹನವನ್ನು ನಿಲ್ಲಿಸಲು ಕೈಸನ್ನೇ ಮಾಡಿದಾಗ ಚಾಲಕ ಓಮಿನಿ ವಾಹನವನ್ನು ನಿಲ್ಲಿಸಲು ಕೈಸನ್ನೇ ಮಾಡಿದಾಗ ಚಾಲಕ ಓಮಿನಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿ ಆಗಿದ್ದಾನೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment